ಹೆಗ್ಡೆಯನ್ನೇ ಮತ್ತೆ ಲೋಕಾಯುಕ್ತರನ್ನಾಗಿ ಮಾಡಿ: ಭಾರದ್ವಾಜ್ ಬಾಂಬ್
ಬೆಂಗಳೂರು,
ನ.23: ಲೋಕಾಯುಕ್ತರಾಗಿ ನ್ಯಾಯಮೂರ್ತಿ ಬನ್ನೂರುಮಠರ ಹೆಸರನ್ನು ಶಿಫಾರಸು ಮಾಡಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ನೇತೃತ್ವದ ಉನ್ನತಮಟ್ಟದ ಸಮಿತಿಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಮಂಗಳಾರತಿ ಎತ್ತಿದ್ದಾರೆ. id="toptextpromo">ಸರಕಾರದ
ಶಿಫಾರಸನ್ನು ವಾಪಸು ಕಳಿಸಿರುವ ರಾಜ್ಯಪಾಲ ಭಾರದ್ವಾಜ್ ಯಾವುದೇ ಕಾರಣಕ್ಕೂ ಬನ್ನೂರುಮಠರ ಹೆಸರನ್ನು ಲೋಕಾಯುಕ್ತಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ ಎಂದಿದ್ದಾರೆ. ಬದಲಿಗೆ ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ಹೆಸರನ್ನು ಪ್ರಸ್ತಾವಿಸಿದರೆ ಒಂದೇ ನಿಮಿಷದಲ್ಲಿ ಕಣ್ಣುಮುಚ್ಚಿಕೊಂಡು ಸಹಿ ಹಾಕುವೆ ಎಂದು ಭಾರದ್ವಾಜ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಲೋಕಾಯುಕ್ತ
ಪೀಠಕ್ಕೆ ನೇಮಗೊಳ್ಳುವಂತಹ ಅರ್ಹತೆಯುಳ್ಳವರು ಇದ್ದಾರೆ. ಕಳಂಕಿತರ ನೇಮಕಕ್ಕೆ ನಾನು ಅವಕಾಶ ನೀಡುವುದಿಲ್ಲ. ನ್ಯಾ. ಸಂತೋಷ್ ಹೆಗ್ಡೆ ಅವರೇ ಆಗಲಿ ಅಥವಾ ಅವರಂತಹ ಪ್ರಮಾಣಿಕತೆಯ ವ್ಯಕ್ತಿಯ ಹೆಸರನ್ನು ಸೂಚಿಸದರೂ ಕ್ಷಣಾರ್ಧದಲ್ಲಿ ಒಪ್ಪುವೆ ಎಂದು ಭಾರದ್ವಾಜ್ ಸ್ಪಷ್ಟಪಡಿಸಿದ್ದಾರೆ.











Click it and Unblock the Notifications