ಅಪ್ಪನಂತೆ ಮಗ, ಗಡಾಫಿ ಪುತ್ರ ಕೂಡಾ ಕಾಮಪಿಪಾಸು

ಸೈಫ್ ಮಾಜಿ ಪತ್ನಿ ನಾಡಿಯಾ ಮಾಸ್ಕೋ ನೈಟ್ ಕ್ಲಬ್ ನಲ್ಲಿ ಸ್ಟ್ರಿಪರ್(ಬಿಚ್ಚಮ್ಮ) ಆಗಿದ್ದವಳು. ಸೈಫ್ ನನ್ನು ಮದುವೆಯಾಗಿ ಸೆಟಲ್ ಆಗಲು ಯೋಚಿಸಿದ್ದಳು. ಇದಕ್ಕಾಗಿ ಪ್ಯಾರೀಸ್ ಗೆ ಹಾರಿ ತನ್ನ ಕನ್ಯತ್ವವನ್ನು ಪುನರ್ ಸ್ಥಾಪಿಸಿಕೊಳ್ಳಲು ಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದಳು.
ಆದರೆ, ಸೈಫ್ ನನ್ನನ್ನು 'ಕೀಪ್' ಆಗೇ ಇಟ್ಟುಕೊಳ್ಳಲು ಬಯಸಿದ್ದ. ಮದುವೆ, ಮಕ್ಕಳು ಅವರ ಜಗತ್ತಿನಲ್ಲಿ ಕೇಳಬಾರದ ಶಬ್ದಗಳಾಗಿದ್ದವು. ಆದರೂ ಹಠ ಬಿಡದೇ ನಾನು ಸೈಫ್ ನನ್ನು ಮದುವೆಯಾದೆ.
ಗೂಳಿಯಂತೆ ನುಗ್ಗುತ್ತಿದ್ದ ಸೈಫ್: ಮಾದಕವ್ಯಸನಿಯಾದ ಸೈಫ್ ಮತ್ತೇರಿಸಿಕೊಂಡು ಗೂಳಿಯಂತೆ ನನ್ನ ಮೇಲೆ ನುಗ್ಗುತ್ತಿದ್ದ. ಅದನ್ನು ಕಷ್ಟಪಟ್ಟು ಸಹಿಸಿಕೊಂಡರೂ ಎಲ್ಲರೆದರೂ ಸಾರ್ವಜನಿಕ ಸ್ಥಳದಲ್ಲಿ ಸಂಭೋಗ ಬಯಸಿ, ಒತ್ತಾಯ ಪೂರ್ವಕವಾಗಿ ಹಲ್ಲೆ ಮಾಡುತ್ತಿದ್ದ. ಇದರಿಂದ ನನಗೆ ತುಂಬಾ ನೋವಾಗಿ ಅತನನ್ನು ತೊರೆದೆ ಎಂದು ಡೈಲಿ ಮೇಲ್ ಗೆ ತನ್ನ ದುಃಖ ಹೇಳಿಕೊಂಡಿದ್ದಾಳೆ ನಾಡಿಯಾ.
ತೆವಲುಗಳ ರಾಜ ಗಡಾಫಿ ಸ್ತ್ರೀ ಪುರುಷರೆನ್ನದೆ ಎಲ್ಲರೊಡನೆ ಸಮಾನವಾಗಿ ಸಂಭೋಗಕ್ಕೆ ಇಳಿಯುತ್ತಿದ್ದ. ಇದಕ್ಕೆ ಐದು ಜನ ಹೆಂಗಳೆಯರ ಸಂಗ ಕಾಮಕ್ರೀಡೆ ಆಡದಿದ್ದರೆ ಹುಚ್ಚು ಹಿಡಿದಂತೆ ವರ್ತಿಸುತ್ತಿದ್ದ. ಇದೇ ಗುಣ ಆತನ ಮಗನಿಗೂ ಬಂದಿದೆ ಎಂದು ಗಡ್ಡಾಫಿ ಸೇವಕ ಫೈಸಲ್ ಹೇಳಿದ್ದಾನೆ.
ಲಿಬಿಯದ ಆಡಳಿತಾರೂಢ ಮಧ್ಯಂತರ ಸರಕಾರ(ಎನ್‌ಟಿಸಿ) ಸೇನೆಗೆ ಸೆರೆ ಸಿಕ್ಕ ಸೈಫ್ ಸುಮಾರು 2 ಬಿಲಿಯನ್ ಡಾಲರ್ ಲಂಚ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಎಂಬ ಸುದ್ದಿ ಕೂಡಾ ಇದೆ. ಗಡಾಫಿ ಕಿರಿಯ ಪುತ್ರ ಖಾಮಿಸ್ ಇನ್ನೂ ಜೀವಂತವಾಗಿದ್ದು, ಆತನ ಸುಳಿವು ಸೇನೆ ಈಗಾಗಲೇ ಸಿಕ್ಕಿದೆ ಎನ್ನಲಾಗಿದೆ.












Click it and Unblock the Notifications