ಮತ್ತೆ ಲೋಕಾಯುಕ್ತ ಆಗುವುದಕ್ಕೆ ಒಪ್ಪೊಲ್ಲ: ಸಂತೋಷ್ ಹೆಗ್ಡೆ
ಬೆಂಗಳೂರು,
ನ.23: ನ್ಯಾ. ಸಂತೋಷ್ ಹೆಗ್ಡೆ ಅವರನ್ನೇ ಮತ್ತೆ ಲೋಕಾಯುಕ್ತರನ್ನಾಗಿ ಮಾಡಿ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಸರಕಾರಕ್ಕೆ ಸಲಹೆ ನೀಡಿದ ಕೆಲವೇ ಕ್ಷಣಗಳಲ್ಲಿ ನ್ಯಾ. ಹೆಗ್ಡೆ ಅವರು ಯಾವುದೇ ಕಾರಣಕ್ಕೂ ಮತ್ತೆ ಲೋಕಾಯುಕ್ತ ಆಗುವುದಕ್ಕೆ ತಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. id="toptextpromo">ಲೋಕಾಯುಕ್ತರಾಗಿ
ನ್ಯಾಯಮೂರ್ತಿ ಬನ್ನೂರುಮಠರ ಹೆಸರನ್ನು ಶಿಫಾರಸು ಮಾಡಿ, ಮುಖ್ಯಮಂತ್ರಿ ಸದಾನಂದ ಗೌಡ ನೇತೃತ್ವದ ಸಮಿತಿ ಕಳಿಸಿದ್ದ ಶಿಫಾರಸನ್ನು ಖಡಾಖಂಡಿತವಾಗಿ ತಿರಸ್ಕರಿಸುವ ಮೂಲಕ ರಾಜ್ಯಪಾಲ ಭಾರದ್ವಾಜ್ ರಾಜ್ಯ ರಾಜಕೀಯದಲ್ಲಿ ಸಂಚಲವನ್ನುಂಟು ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದರಿಂದ
ಅರ್ಹ, ಕಳಂಕರಹಿತ ನ್ಯಾಯಮೂರ್ತಿಗಳಿಗೇನೂ ಬರ ಇಲ್ಲ. ಸೂಕ್ತ ವ್ಯಕ್ತಿಯನ್ನು ಲೋಕಾಯುಕ್ತ ಪೀಠದಲ್ಲಿ ಕುಳ್ಳರಿಸಿ ಎಂದು ರಾಜ್ಯಪಾಲ ಭಾರದ್ವಾಜ್ ಈ ಹಿಂದೆಯೂ ಸಲಗೆ ನೀಡದ್ದರು. ಗಮನಾರ್ಹವೆಂದರೆ ಲೋಕಾಯುಕ್ತ ನೇಮಕ ಈಗಾಗಲೇ ವಿಳಂಬವಾಗಿದೆ. 'ಕರ್ನಾಟಕದ ಲೋಕಾಯುಕ್ತ ಸಂಸ್ಥೆ ಇಡೀ ದೇಶದಲ್ಲೇ ಬಲಿಷ್ಠವಾಗಿದೆ ಎಂಬ ಹೆಸರು ಗಳಿಸಿದೆ. ಅದಕ್ಕೆ ಚ್ಯುತಿ ಬಾರದಂತೆ ಶುದ್ಧ ಹಸ್ತರನ್ನು ನೇಮಿಸಿ' ಎಂಬುದು ರಾಜ್ಯಪಾಲ ಭಾರದ್ವಾಜ್ ಅವರ ಹಕ್ಕೊತ್ತಾಯವಾಗಿದೆ.











Click it and Unblock the Notifications