ಶ್ರೀರಾಮುಲುಗೆ ಯಾವುದೇ ಕಳಂಕವಿಲ್ಲ: ಕುಮಾರಸ್ವಾಮಿ ಸರ್ಟಿಫಿಕೇಟ್
ಸಿಂಧನೂರು,
ನ. 23 : 'ರೆಡ್ಡಿ ಬಳಗದವರು ಜೈಲು ಪಾಲಾದ ಸಂದರ್ಭದಲ್ಲಿ ರಾಮುಲು ತನಿಖೆಗೊಳಪಡುತ್ತಾರೆ ಎಂಬ ಸುದ್ದಿ ಹರಿದಾಡಿದ್ದವು. ಆದರೆ ಅವರ ವಿರುದ್ಧ ಯಾವುದೇ ಗುರುತರ ಆರೋಪಗಳು ಇಲ್ಲ. ಅವರೇನಾದರೂ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರೆ ಇಷ್ಟೊತ್ತಿಗಾಗಲೇ ಜೈಲು ಸೇರುತ್ತಿದ್ದರು' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶ್ರೀರಾಮುಲು ಕತ್ತಿಗೆ ಮಂಗಳವಾರ ಸರ್ಟಿಫಿಕೇಟ್ ಲಗತ್ತಿಸಿದರು. id="toptextpromo">ಇದಕ್ಕೂ
ಮುನ್ನ, ' ಬಳ್ಳಾರಿಯಲ್ಲಿ ಭಯದ ವಾತಾವರಣವಿದೆ' ಎಂದು ಯಡಿಯೂರಪ್ಪ ಹಾಗೂ ಡಿ.ವಿ. ಸದಾನಂದ ಗೌಡ ಅವರ ಹೇಳಿಕೆ ಉಡಾಫೆಯದ್ದಾಗಿದೆ ಎಂದು ಲೇವಡಿ ಮಾಡಿದ್ದ ಕುಮಾರಸ್ವಾಮಿ ತಾವೂ ಸಹ ಅಂತಹುದೇ 'ಭಯೋತ್ಪಾದಕ ಶಕ್ತಿ'ಯನ್ನು ಪೋಷಿಸುವಂತಹ ಮಾತನ್ನಾಡಿದ್ದಾರೆ! id='are-slot-1' class='oiad oi-axt oiadv'> id='top-searched-articles'>ಒಳ್ಳೆಯವರನ್ನು
ಒಳ್ಳೆಯರೆನ್ನದೆ ಮತ್ತೇನು ಅನ್ನಲೂ ಸಾಧ್ಯ? ಶ್ರೀರಾಮುಲು ಹಿಂದುಳಿದ ವರ್ಗದ ಶಕ್ತಿಯಂತಿದ್ದಾರೆ. ಬಡವರ ಪರ ಕಾಳಜಿ ತೋರುವ ಮೂಲಕ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದಾರೆ ಎಂದೂ ಕುಮಾರಸ್ವಾಮಿ ರಾಮುಲುವನ್ನು ಬೆಂಬಲಿಸುವ ಮಾತನ್ನಾಡಿದರು.











Click it and Unblock the Notifications