ಸೋಮಣ್ಣ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಕೋರ್ಟ್ ಆದೇಶ
ಬೆಂಗಳೂರು,
ನ.22: ಡಿನೋಟಿಫಿಕೇಷನ್ ಸಂಬಂಧ ಸಚಿವ ವಿ ಸೋಮಣ್ಣ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾ ಎನ್.ಕೆ ಸುಧೀಂದ್ರರಾವ್ ಅವರು ಲೋಕಾಯುಕ್ತ ಪೊಲೀಸರಿಗೆ ಮಂಗಳವಾರ ಆದೇಶಿಸಿದ್ದಾರೆ. ಡಿಸೆಂಬರ್ 26 ರೊಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. id="toptextpromo">ಸಾಫ್ಟ್‌ವೇರ್
ಇಂಜಿನಿಯರ್ ರವಿಕೃಷ್ಣಾ ರೆಡ್ಡಿ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾ ಸುಧೀಂದ್ರ ರಾವ್, ದೂರನ್ನು ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸುವಂತೆ ಸೂಚಿಸಿದರು. ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದರೆ ಶೈಲಜಾ ಸೋಮಣ್ಣ ಎರಡನೆಯ ಆರೋಪಿಯಾಗಿದ್ದಾರೆ. ಲಿಂಗಣ್ಣ ನಾಲ್ಕನೆಯ ಆರೋಪಿ. id='are-slot-1' class='oiad oi-axt oiadv'> id='top-searched-articles'>1993ರಲ್ಲಿ
ಬಿಡಿಎ ಸ್ವಾದೀನಪಡಿಸಿಕೊಂಡಿದ್ದ ಜಮೀನನ್ನು 2005ರಲ್ಲಿ ಸೋಮಣ್ಣ ಅವರ ಪತ್ನಿ ಶೈಲಜಾ ಹೆಸರಿನಲ್ಲಿ ನಾಗದೇವನಹಳ್ಳಿಯಲ್ಲಿ 22 ಗುಂಟೆ ಎಕರೆ ಜಮೀನು ಖರೀದಿಸಲಾಗಿತ್ತು. 2009ರಲ್ಲಿ ಯಡಿಯೂರಪ್ಪ ಅವರು ಈ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ ಎಂದು ಸಾಫ್ಟ್ ವೇರ್ ಇಂಜಿನಿಯರ್ ರವಿಕೃಷ್ಣಾ ರೆಡ್ಡಿ ಲೋಕಾಯುಕ್ತಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.











Click it and Unblock the Notifications