ರಾಜ್ಯ ಬಿಜೆಪಿ ಸರಕಾರ ಆಧುನಿಕ ಭಸ್ಮಾಸುರ: ಕೃಷ್ಣ ಬೈರೇಗೌಡ

karnataka-bjp-modern-bhasmasura-krishna-byregowda
ಸುಳ್ಯ, ನ.22: ರಾಜ್ಯದಲ್ಲಿ ಇವತ್ತು ಬಿಜೆಪಿ ಇಲ್ಲ. ಅದನ್ನು ಆ ಪಕ್ಷದವರೇ ಗುಂಡಿ ತೋಡಿ ಸಮಾಧಿ ಮಾಡಿ ಗೋರಿ ಕಟ್ಟಿದ್ದಾರೆ. ಈಗ ರಾಜ್ಯದಲ್ಲಿರುವುದು 'ಭ್ರಷ್ಟ ಜನಗಳ ಪಕ್ಷ". ಬೆಳಗ್ಗೆ ಮನೆಯಿಂದ ಹೊರಡುವ ಮಂತ್ರಿಗಳು ವಿಧಾನಸೌಧಕ್ಕೆ ಹೋಗುತ್ತಾರೋ, ಜೈಲಿಗೆ ಹೋಗುತ್ತಾರೋ ಎಂದು ಗೊತ್ತಾಗದ ಪರಿಸ್ಥಿತಿ ಇದೆ ರಾಜ್ಯ ಯುವ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಕೃಷ್ಣಬೈರೇಗೌಡ ಹೇಳಿದ್ದಾರೆ.

ಇಲ್ಲಿನ ಬಿಜೆಪಿ ಸರಕಾರ ಆಧುನಿಕ ಭಸ್ಮಾಸುರ ಇದ್ದಂತೆ. ಮತದಾರರಾದ ನೀವು ಕೊಟ್ಟ ವರದಿಂದ ಅಧಿಕಾರ ಪಡೆದು ನಿಮ್ಮನ್ನೇ ಭಸ್ಮ ಮಾಡುತ್ತಿದ್ದಾರೆ. ಆದರೆ ಈಗ ಅಧಿಕಾರದ ಮದ ಮತ್ತು ತನ್ನದೇ ತಪ್ಪಿನಿಂದ ತಾನೇ ಭಸ್ಮವಾಗುವ ದಿನಗಳು ದೂರವಿಲ್ಲ ಎಂದು ಕೃಷ್ಣಬೈರೇಗೌಡ ವ್ಯಾಖ್ಯಾನಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಪಾದಯಾತ್ರೆಯ ಅಂಗವಾಗಿ ಸೋಮವಾರ ಸಂಜೆ ಸುಳ್ಯದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಭಾಷಣ ಮಾತನಾಡಿದರು.

ಕಾಂಗ್ರೆಸ್ ಅನೇಕ ಯೋಜನೆಗಳ ಮೂಲಕ ಕರ್ನಾಟಕದ ಗೌರವವನ್ನು ದೇಶಕ್ಕೆ ಎತ್ತಿ ತೋರಿಸಿತ್ತು. ಆದರೆ ಬಿಜೆಪಿ, ಕರ್ನಾಟಕದ ಮರ್ಯಾದೆ ತೆಗೆಯುತ್ತಿದೆ. ನನ್ನಂತಹ ಶಾಸಕನಿಗೆ ವಿಧಾನಸೌಧ ಪ್ರವೇಶಿಸಲು ಹೇಸಿಗೆಯಾಗುತ್ತಿದೆ ಎಂದವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+