ಹೆಂಡತಿ, ಮಕ್ಕಳು ಮಲಗಿದ್ದ ಗುಡಿಸಲಿಗೇ ಬೆಂಕಿ ಹಚ್ಚಿದ ಗಂಡ
ಹೊಸದುರ್ಗ,
ನ.22: ಬಾಗಿಲು ತೆಗೆಯಲಿಲ್ಲವೆಂಬ ಸಿಟ್ಟಿಗೆ ಗಂಡನೊಬ್ಬ ತನ್ನ ಹೆಂಡತಿ ಮಕ್ಕಳು ಮಲಗಿದ್ದ ಗುಡಿಸಲಿಗೇ ಬೆಂಕಿ ಹಚ್ಚಿರುವ ಘಟನೆ ಸೋಮವಾರ (ನ.21) ಬೆಳಗಿನಜಾವ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದಲ್ಲಿ ನಡೆದಿದೆ. id="toptextpromo">ಗ್ರಾಮದ
ಮಂಜುಳ (35) ತನ್ನ ಮಗ ಚೇತನ (4), ಮಗಳು ಪ್ರಿಯಾಂಕ(7) ಹಾಗೂ ತಂದೆ,ತಾಯಿಯೊಂದಿಗೆ ತನ್ನ ಗುಡಿಸಲಿನಲ್ಲಿ ಮಲಗಿದ್ದಾಗ ಬೆಳಗಿನಜಾವ ಗಂಡ ಲಕ್ಷ್ಮಣನು ಬಾಗಿಲು ತಟ್ಟಿದ್ದು, ಗಂಡನು ಗಲಾಟೆ ಮಾಡುತ್ತಾನೆ ಎಂಬ ಉದ್ದೇಶದಿಂದ ಮಂಜುಳ ಬಾಗಿಲು ತೆಗೆಯದಿದ್ದಾಗ ಲಕ್ಷ್ಮಣನು ಗುಡಿಸಲಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಗುಡಿಸಲಿಗೆ
ಬೆಂಕಿ ಬಿದ್ದಿರುವ ಬಗ್ಗೆ ತಿಳಿದ ಮಂಜುಳ ಎಲ್ಲರನ್ನೂ ಗುಡಿಸಲಿನಿಂದ ಹೊರಗೆ ಕರೆದುಕೊಂಡು ಬಂದಿದ್ದು, ಯಾರಿಗೂ ಅಪಾಯವಾಗಿರುವುದಿಲ್ಲಾ ಆದರೆ ಗುಡಿಸಲು ಸುಟ್ಟು ಸುಮಾರು 15,000 ರೂಪಾಯಿಯಷ್ಟು ನಷ್ಟವುಂಟಾಗಿದೆ. ಬೆಳಿಗ್ಗೆ ಲಕ್ಷ್ಮಣನು ಮಂಜುಳ ರವರಿಗೆ ಪೋನ್ ಮಾಡಿ ಈ ಸಾರಿ ಬದುಕಿದ್ದೀಯ, ಇನ್ನೊಂದು ಸಾರಿ ನೀನು ಮಲಗಿದ್ದಾಗ ಬೆಂಕಿ ಹಚ್ಚಿ ಸಾಯಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಮಂಜುಳ ದೂರು ನೀಡಿದ್ದು, ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ. (ಒನ್‌ಇಂಡಿಯಾ ಕನ್ನಡ)











Click it and Unblock the Notifications