ಕಡ್ಲೇಕಾಯಿ ಪರಿಷೆಗೆ ಸಚಿವ ಅಶೋಕ್ ಚಾಲನೆ

R Ashok
ಬೆಂಗಳೂರು ನ. 21: ಸುಮಾರು ಐದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಐತಿಹಾಸಿಕ ಕಡಲೇಕಾಯಿ ಪರಿಷೆಗೆ ನಗರದ ಬಸವನಗುಡಿ ದೊಡ್ಡ ಬಸವಣ್ಣ ದೇವಾಲಯದ ಆವರಣದಲ್ಲಿ ರಾಜ್ಯ ಗೃಹ ಸಚಿವ ಆರ್ ಅಶೋಕ್ ಅವರು ಚಾಲನೆ ನೀಡಿದರು. ಸೋಮವಾರ (ನ.21) ದಿಂದ ಎರಡು ದಿನಗಳ ಕಾಲ ಈ ಮೇಳ ನಡೆಯಲಿದೆ.

ಪ್ರತಿ ವರ್ಷ ಸುಮಾರು ಎರಡು ಮೂರು ಲಕ್ಷ ಜನ ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವರ್ಷದ ಕಡೇ ಕಾರ್ತಿಕ ಸೋಮವಾರದಂದು ನಡೆಯುವ ಈ ಮೇಳದಲ್ಲಿ ಕಡಲೇಕಾಯಿ ಬೆಳೆದ ರೈತರು ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಗ್ರಾಹಕರಿಗೆ ಈ ಜಾತ್ರೆಯಲ್ಲಿ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಬೆಲೆಗೆ ಕಡ್ಲೇಕಾಯಿ ಮಾರಾಟ ಮಾಡುವಂತಿಲ್ಲ ಎಂದು ಆರ್ ಅಶೋಕ್ ಹೇಳಿದರು.

ಕಡ್ಲೇಕಾಯಿ ಪರಿಷೆಗೆ ರಾಮನಗರ, ಚನ್ನಪಟ್ಟಣ, ತುಮಕೂರು, ಕೋಲಾರ ಮುಂತಾದ ಕಡೆಯಿಂದ ರೈತರು ಬಂದಿದ್ದಾರೆ. ತಮಿಳುನಾಡು ಹಾಗೂ ಆಂಧ್ರಪ್ರದೇಶದ ರೈತರು, ವ್ಯಾಪಾರಿಗಳು ಕೂಡಾ ಪರಿಷೆಯ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡಾ ಸ್ಥಳೀಯ ವಾರ್ಡ್ ಆಯೋಜಿಸಿದೆ.

ಬಸವನಗುಡಿ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರವಾಗಿದ್ದು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಈ ಉತ್ಸವದಲ್ಲಿ ಎಲ್ಲರೂ ಪ್ಲಾಸ್ಟಿಕ್ ಕಡಿಮೆ ಬಳಕೆ ಮಾಡಬೇಕು ಎಂದು ಸಚಿವ ಆಶೋಕ್ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+