ಶ್ರೀರಾಮುಲು ಪರ ಪ್ರಚಾರ ಇಲ್ಲ: ಕುಮಾರಸ್ವಾಮಿ

ಭಾನುವಾರ(ನ.20) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜಕೀಯದಲ್ಲಿ ಮಿತ್ರರಿಲ್ಲ, ಯಾರೂ ಶತ್ರುಗಳಿಲ್ಲ. ಸಮಯ ಸಂದರ್ಭಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಮ್ಮ ನಿರ್ಧಾರಗಳು ಪಕ್ಷದ ಹಿತದೃಷ್ಟಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದರು.
ಶ್ರೀರಾಮುಲು ಗೆದ್ದರೆ ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಲು ಬಿಜೆಪಿ ಮುಂದಾಗಿರಬಹುದು. ಆದರೆ, ರಾಮುಲು ಅವರು ಮತ್ತೆ ಬಿಜೆಪಿ ಸೇರುವ ಬಗ್ಗೆ ನನಗೆ ನಂಬಿಕೆಯಿಲ್ಲ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಸೂಕ್ತ ಅಭ್ಯರ್ಥಿ ಕೊರತೆ ಎದುರಿಸಿ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಎಂಬ ಸದಾನಂದ ಗೌಡರ ಹೇಳಿಕೆ ಶುದ್ಧ ಸುಳ್ಳು ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications