ನಮ್ಮ ಶಾಸಕರು ಕೈ ಎತ್ತಿದ್ರೆ ಸರ್ಕಾರ ಪತನ: ಶ್ರೀರಾಮುಲು

ಪಕ್ಷೇತರ ಅಭ್ಯರ್ಥಿ ಬಿ ಶ್ರೀರಾಮುಲು ಮಾತ್ರ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ತಮ್ಮ ಪರ ಪ್ರಚಾರಕ್ಕೆ ಬಂದೇ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಚಾರ ಕಾರ್ಯಕ್ಕೆ ಬಂದು ನನ್ನ ಬೆಂಬಲಿಸುವವರಿಗೆ ನಾನು ಸ್ವಾಗತ ಕೋರುತ್ತೇನೆ. ಯಡಿಯೂರಪ್ಪ ಅವರು ತಮ್ಮ ಪ್ರಭಾವ ಕಳೆದುಕೊಂಡಿದ್ದಾರೆ. ಬಿಜೆಪಿ ಪರ ಅವರ ಪ್ರಚಾರದಿಂದ ಯಾವುದೇ ಪ್ರಯೋಜನವಾಗುವುದಿಲಲ್ ಎಂದು ಶ್ರೀರಾಮುಲು ಹೇಳಿದರು.
ಸರ್ಕಾರದ ಅಳಿವು ಉಳಿವು ಬಳ್ಳಾರಿ ಶಾಸಕರ ಕೈಲಿದೆ. ಶಾಸಕರೆಲ್ಲ ಬಂದು ನನ್ನ ಬಳಿ ಸಾಮೂಹಿಕ ರಾಜೀನಾಮೆ ಸಲ್ಲಿಸುವ ಮಾತಾಡಿದಾಗ ನಾನೇ ಅವರನ್ನು ಸಮಾಧಾನ ಮಾಡಿ ಕಳಿಸಿದ್ದೇನೆ. ಎಲ್ಲರೂ ರಾಜೀನಾಮೆ ಕೊಟ್ಟರೆ ಸದಾನಂದ ಗೌಡರ ಸರ್ಕಾರ ಕ್ಷಣ ಕಾಲ ಕೂಡಾ ಉಳಿಯದು ಎಂದು ಶ್ರೀರಾಮುಲು ಹೇಳಿದ್ದಾರೆ.












Click it and Unblock the Notifications