ಕರೆಂಟ್ ಮಂತ್ರಿಗೆ ಷಾಕ್ ನೀಡಿದ ಬಳ್ಳಾರಿ ಮಹಿಳೆಯರು

"ದಯವಿಟ್ಟು ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪಗೆ ಮತ ನೀಡಿ" ಎಂದು ಕೇಳಿದ ಶೋಭಾ ಕಂದ್ಲಾಜೆಗೆ "ಮೊದಲು ಕರೆಂಟ್ ನೀಡಿ ನಂತರ ಲಿಂಗಪ್ಪಗೆ ಮತ ನೀಡುತ್ತೇವೆ" ಎಂದು ಮಹಿಳೆಯರು ಸೀರೆಯನ್ನು ಸೊಂಟಕ್ಕೆ ಸಿಕ್ಕಿಸಿ ಶೋಭಾ ಜೊತೆ ಮಾತಿಗಿಳಿದಿದ್ದಾರೆ.
ಇಂಥ ಷಾಕನ್ನು ನಿರೀಕ್ಷಿಸಿರದಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆ, ಈ ಪ್ರಶ್ನೆಯನ್ನು ಮೊದಲು ನೀವು ಕೇಳಬೇಕಾಗಿರುವುದು ನಿಮ್ಮ ಕ್ಷೇತ್ರದಲ್ಲಿ ಹಿಂದೆ ಆಯ್ಕೆ ಮಾಡಿ ಕಳಿಸಿದ್ದ ಶಾಸಕರಿಗೆ ಎಂದು ಶ್ರೀರಾಮುಲು ವಿರುದ್ಧ ಕಿಡಿ ಕಾರಿದರು.
ಆರಂಭಿಕ ಷಾಕ್‌ನಿಂದ ಕೊನೆಗೆ ಸಾವರಿಸಿಕೊಂಡ ಶೋಭಾ ಕರಂದ್ಲಾಜೆ, ಆಯ್ತು ನಿಮ್ಮ ಬೇಡಿಕೆಯ ಬಗ್ಗೆ ಪರಿಗಣಿಸುತ್ತೇನೆ, ಮೊದಲು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಅವರನ್ನು ಗೆಲ್ಲಿಸಿಕೊಡಿ ಎಂದು ಅಂಗಲಾಚಿದ್ದಾರೆ.
ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವ ಬಿ ಶ್ರೀರಾಮುಲು ಮತ್ತು ಬಿಜೆಪಿಯ ಗಾದಿ ಲಿಂಗಪ್ಪ ನಡುವೆ ನೇರ ಹಣಾಹಣಿ ನಡೆಯಲಿದೆ. ಕಾಂಗ್ರೆಸ್ ನಿಂದ ಬಿ ರಾಮ್‌ಪ್ರಸಾದ್ ಕಣಕ್ಕಿಳಿದಿದ್ದಾರೆ. ಚುನಾವಣೆ ನವೆಂಬರ್ 30ರಂದು ನಡೆಯಲಿದೆ.












Click it and Unblock the Notifications