ಈಶ್ವರಪ್ಪ ಗುಟುರಿಗೆ ಮೆತ್ತಗಾದ ರೆಡ್ಡಿ ಬಂಟ ಆನಂದ

Hospet MLA Anand Singh
ಬೆಂಗಳೂರು, ನ.18: ಒಂದು ಕಾಲದಲ್ಲಿ ಗಾಲಿ ಜನಾರ್ದನ ರೆಡ್ಡಿ ಬಂಟನಾಗಿ ಅವರ ಹಿಂದೆ ಮುಂದೆ ಸುತ್ತುತ್ತಿದ್ದ ಆಗರ್ಭ ಶ್ರೀಮಂತ ಆನಂದ್ ಸಿಂಗ್ ಈಗ ಬಿಜೆಪಿ ಪಾಳೆಯದಲ್ಲಿ ಸ್ಥಿರವಾಗಿ ನಿಂತುಕೊಂಡಿದ್ದಾರೆ.

ಈ ದಿಢೀರ್ ಬದಲಾವಣೆಯೊಂದಿಗೆ ಬಳ್ಳಾರಿಯ ಸಮಸ್ತ ಬಿಜೆಪಿ ಶಾಸಕರು, ಸಂಸದರು ಶ್ರೀರಾಮುಲು ನೆರಳಿನಿಂದ ಸುತ್ತುವುದನ್ನು ಬಿಟ್ಟು ಕೇಸರಿ ಧ್ವಜದ ನೆರಳಿಗೆ ಬಂದಿದ್ದಾರೆ. ಇಷ್ಟಕ್ಕೆಲ್ಲ ಕಾರಣ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹಾಕಿದ ಗುಟುರು ಎನ್ನಲಾಗಿದೆ.

ವಿಜಯನಗರ ಕ್ಷೇತ್ರ ಶಾಸಕ ಆನಂದ್ ಸಿಂಗ್ ಬಿಜೆಪಿ ಸಭೆಯಲ್ಲಿ ಹಾಜರಾಗಿದ್ದು ಎಲ್ಲರೂ ಅಚ್ಚರಿ ಮೂಡಿಸಿತ್ತು.

ಶ್ರೀರಾಮುಲು ಪರ ಗುರುತಿಸಿಕೊಂಡಿರುವ ಶಾಸಕರನ್ನು ಉಚ್ಚಾಟಿಸಲು ಬಿಜೆಪಿ ಮುಂದಾಗಿದೆ ಎಂಬ ಸೂಚನೆ ಸಿಕ್ಕ ನಂತರ ಒಬ್ಬೊಬ್ಬರಾಗಿ ಬಿಜೆಪಿ ಸಭೆ ಕಡೆಗೆ ಮರಳಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಬಿಎಸ್ ಯಡಿಯೂರಪ್ಪ ಅವರು ಕೂಡಾ ಪ್ರಚಾರಕ್ಕೆ ಬರಲು ಒಪ್ಪಿಗೆ ನೀಡಿದ್ದು ಬಳ್ಳಾರಿ ಬಿಜೆಪಿ ನಾಯಕರಿಗೆ ವರವಾಗಿದೆ.

ಗಾಲಿ ರೆಡ್ಡಿ ಬೇರೆ ಜೈಲಿನಲ್ಲಿದ್ದಾರೆ, ಕರುಣಾ, ಸೋಮಶೇಖರ ಲೆಕ್ಕಕ್ಕಿಲ್ಲ, ಶ್ರೀರಾಮುಲು ನೆಚ್ಚಿಕೊಂಡು ಹರ್ಷದ ಕೂಳು ನೆಚ್ಚಿಕೊಂಡು ವರ್ಷದ ಕೂಳು ತಪ್ಪಿಸಿಕೊಳ್ಳುವುದು ಬೇಡ. ಮನೆ ದೇವರನ್ನ ಮೂಲೆಗಿಟ್ಟು ಬೆಟ್ಟದ ದೇವರಿಗೆ ಬುತ್ತಿ ಹಚ್ಚುವ ಹುಚ್ಚು ಕಾರ್ಯ ಏಕೆ ಎಂದು ಯೋಚಿಸಿರುವ ಆನಂದ್ ಸಿಂಗ್ ಹಾಗೂ ಶಿರಗುಪ್ಪ ಶಾಸಕ ಸೋಮಲಿಂಗಪ್ಪ ಈಗ ಕೇಸರಿ ಬಾವುಟಕ್ಕೆ ಜೈ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+