ನೀರು ಕೊಡದ ಅಧಿಕಾರಿಗಳಿಗೆ ಚಪ್ಪಲಿ ಎಸೆದ ಹಳ್ಳಿಗರು
ಕೋಲಾರ,
ನ. 18 : ಶ್ರೀನಿವಾಸಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಆಗ್ರಹಿಸಿ ಹಳ್ಳಿಗರು ಗುರುವಾರ ಕೋಲಾರ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಹಳೆ ಚಪ್ಪಲಿ, ಪೊರಕೆ, ಕಿತ್ತುಹೋದ ಬಿಂದಿಗೆ ಎಸೆದು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು. id="toptextpromo">ಕುಡಿಯುವ
ನೀರಿಗೆ ತತ್ವಾರವಿದ್ದರೂ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನವೆಂಬರ್‌ನಲ್ಲಿಯೇ ನೀರಿಗೆ ಈ ಮಟ್ಟದಲ್ಲಿ ಸಮಸ್ಯೆ ನಿರ್ಮಾಣವಾಗಿದೆ. ಇನ್ನು ಬೇಸಿಗೆಯಲ್ಲಿ ಅಧಿಕಾರಿಗಳು ಯಾವ ರೀತಿಯಾಗಿ ಸ್ಪಂದಿಸುತ್ತಾರೆ ಎಂದು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಜನರು ಜಿಲ್ಲಾ ಪಂಚಾಯಿತಿಗೆ ಮುತ್ತಿಗೆ ಹಾಕಿದರು. id='are-slot-1' class='oiad oi-axt oiadv'> id='top-searched-articles'>ನಂತರ
ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ, ತಾವು ತಂದಿದ್ದ ಹಳೆ ಚಪ್ಪಲಿ ಪೊರಕೆ ಹಾಗು ಕಿತ್ತು ಹೋದ ಬಿಂದಿಗೆಗಳನ್ನು ಕಚೇರಿ ಮೆಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, "ಅಧಿಕಾರಿ ವರ್ಗ ಭ್ರಷ್ಟರಾಗಿದ್ದಾರೆ. ಕುಡಿಯುವ ನೀರಿಗೂ ರಾಜಕೀಯ ಮಾಡುತ್ತಿದ್ದಾರೆ" ಎಂದು ಕೆಂಡ ಕಾರಿದರು.











Click it and Unblock the Notifications