ರಾಮುಲು ಗಾಳಿ ಬೀಸುವ ಮೊದಲೇ ಬಾಗಿಲು ಬಂದ್ ಮಾಡಿದ ಬಿಜೆಪಿ

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ವಕ್ತಾರ ಆಯನೂರು ಮಂಜುನಾಥ್, ರಾಮುಲು ಅವರಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್ ಆಗಿದೆ. ಅವರು ಚುನಾವಣೆಯಲ್ಲಿ ಗೆಲ್ಲಲಿ, ಸೋಲಲಿ ಅಥವಾ ಸರಕಾರದ ಅಸ್ತಿತ್ವದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರಲಿ, ಯಾವುದೇ ಕಾರಣಕ್ಕೂ ಅವರಿಗೆ ಮರು ಪ್ರವೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಯುದ್ಧ ಕೈದಿಗಳು ಯಾರು : ಶ್ರೀರಾಮುಲು ಚುನಾವಣೆಯಲ್ಲಿ ಗದ್ದರೆ ಬಿಜೆಪಿ ಗತಿ (ಸೀಲಿಂಗ್ ಫ್ಯಾನ್) ಗಾಳಿಗೊಡ್ಡಿದಾ ದೀಪದಂತೆ ಆಗುತ್ತದಂತೆ! ಎಂದು ಯಾರೋ ಪಿಸುಗುಟ್ಟಿದ್ದು ಅಲೆಅಲೆಯಾಗಿ ಕೇಳಿಬರುತ್ತಿರುವುದು ಚೋದ್ಯವಷ್ಟೇ.
ಆಪರೇಷನ್ ಕಮಲದ ಸೂತ್ರಧಾರ ಜನಾರ್ದನ ರೆಡ್ಡಿಯ ಪರಮಾಪ್ತ ಶ್ರೀರಾಮುಲು ವಿರುದ್ಧ ಸೆಟೆದು ನಿಲ್ಲುವ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ರಾಜಕೀಯ ನಡೆ ಒಂದು ಘಟ್ಟಕ್ಕೆ ಬಂದು ನಿಂತಿದೆ.
'ಚುನಾವಣೆಯ ಆರಂಭದ ದಿನಗಳಲ್ಲಿ ಇದ್ದ ಪರಿಸ್ಥಿತಿ ಈಗ ಬದಲಾಗಿದೆ. ವಿಜಯನಗರ ಶಾಸಕ ಆನಂದ ಸಿಂಗ್, ಹೂವಿನ ಹಡಗಲಿ ಶಾಸಕ ಚಂದ್ರ ನಾಯಕ ಇಂದಿನ ಸಭೆಗೆ ಹಾಜರಾಗಿದ್ದಾರೆ. ಕಂಪ್ಲಿ ಶಾಸಕ ಸುರೇಶ ಬಾಬು, ಸಂಸದಾರದ ಜೆ. ಶಾಂತ ಹಾಗೂ ಸಣ್ಣ ಫಕೀರಪ್ಪ ಸೇರಿದಂತೆ ಮೂರ್ನಾಲ್ಕು ಜನ ರಾಮುಲು ಪರ ಇದ್ದಾರೆ. ಉಳಿದಂತೆ ಎಲ್ಲರೂ ಪಕ್ಷದ ಜೊತೆ ಬರುವ ವಿಶ್ವಾಸವಿದೆ ಎಂದ ಆಯನೂರು 'ಈಗ ಯುದ್ಧ ಆರಂಭವಾಗಿದೆ, ನಂತರ ಯುದ್ಧ ಕೈದಿಗಳು ಯಾರು ಎಂದು ಗೊತ್ತಾಗುತ್ತೆ. ಆಗ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.












Click it and Unblock the Notifications