ಮೂರು ಜೆಡಿಎಸ್ ಶಾಸಕರ ವಿರುದ್ದ ಕೇಸ್ ದಾಖಲು
ಮಂಡ್ಯ
ನ 17: ಜಾತ್ಯಾತೀತ ಜನತಾದಳದ ಶಾಸಕರುಗಳಾದ ಎಂ ಶ್ರೀನಿವಾಸ್ (ಮಂಡ್ಯ), ಸಿ ಎಸ್ ಪುಟ್ಟರಾಜು (ಮೇಲುಕೋಟೆ) ಮತ್ತು ರಮೇಶ್ ಬಂಡಿ ಸಿದ್ದೇಗೌಡ (ಶ್ರೀರಂಗಪಟ್ಟಣ) ಅವರ ಮೇಲೆ ಮಂಡ್ಯ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ (ನ 17) ಪ್ರಕರಣ ದಾಖಲಾಗಿದೆ. id="toptextpromo">ಮುಡಾ
(ಮಂಡ್ಯ ನಗರಾಭಿವೃದ್ದಿ ಪ್ರಾಧಿಕಾರ) ನಿವೇಶನ ಹಂಚಿಕೆಯಲ್ಲಿ ಮೂವರು ಶಾಸಕರು ಸಹಿತ ಏಳು ಮಂದಿ ಅಕ್ರಮ ಎಸಗಿದ್ದಾರೆಂದು ಆರೋಪಿಸಿ ವಕೀಲ ಸಿ.ಎಸ್. ಸತ್ಯಾನಂದ ಎನ್ನುವವರು ಖಾಸಾಗಿ ದೂರು ದಾಖಲಿಸಿದ್ದಾರೆ. ಮೂವರು ಶಾಸಕರಲ್ಲದೆ ಮುಡಾ ಅಧ್ಯಕ್ಷೆ, ಮುಡಾ ಆಯುಕ್ತ ಮತ್ತು ಮಾಜಿ ಆಯುಕ್ತರ ಮೇಲೂ ದೂರು ದಾಖಲಾಗಿದೆ. id='are-slot-1' class='oiad oi-axt oiadv'> id='top-searched-articles'>ನಗರಾಭಿವೃದ್ದಿ
ಪ್ರಾಧಿಕಾರದ ನಿವೇಶನವನ್ನು ಅಕ್ರಮವಾಗಿ ಹಂಚಲಾಗಿದೆ ಎನ್ನುವುದು ದೂರು. 2002 ರಲ್ಲಿ ಮುಡಾದಿಂದ ಕೆಲವು ನಿವೇಶನಗಳನ್ನು ಹಂಚಲಾಗಿತ್ತು. ಆದರೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಬಿಜೆಪಿಯಿಂದ ಅಧ್ಯಕ್ಷೆ ಯಾಗಿರುವ ವಿದ್ಯಾ ನಾಗೇಂದ್ರ ಅವರ ಕಳೆದ ಒಂದೂವರೆ ವರ್ಷದ ಹಿಂದೆ ಹಂಚಿಕೆ ಮಾಡಿದ್ದ ನಿವೇಶನದಲ್ಲಿ ಅಕ್ರಮವೆಸಗಲಾಗಿದೆ ಎನ್ನುವುದು ವಕೀಲ ಸತ್ಯಾನಂದ ಅವರ ದೂರು.











Click it and Unblock the Notifications