ಏನ್ಲಾ ಸಂಪಂಗಿ ನ್ಯಾ. ಸುಧೀಂದ್ರಗೆ ಬತ್ತಿ ಇಟ್ಯಲ್ಲೋ

ನ್ಯಾ.ಸುಧೀಂದ್ರರಾವ್ ಅವರ ಅಣ್ಣ ಎನ್.ಕೆ ಬದ್ರಿನಾಥ್ ಸಹ ಬಂಗಾರಪೇಟೆ ನಿವಾಸಿಯಾಗಿದ್ದು, ವೈ ಸಂಪಂಗಿಯನ್ನು ಜೈಲಿಗೆ ಕಳಿಸಿದ್ದು ನಾನೇ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಸಂಪಂಗಿ ಪರವಾಗಿ ಅಮರೇಂದ್ರ ಮೌನಿ ಎಂಬುವರು ಹೈ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ್ದರು.
ಲೋಕಾಯುಕ್ತ ವಿಶೇಷ ನ್ಯಾಯಾಧೀಶ ಸುಧೀಂದ್ರ ರಾವ್ ಅವರನ್ನು ಬದಲಾಯಿಸದ ಹೊರತೂ ನಿಷ್ಪಕ್ಷಪಾತ ವಿಚಾರಣೆ ಸಾಧ್ಯವಿಲ್ಲ. ಹಾಗಾಗಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಿ ಜಡ್ಜ್ ಬದಲಾವಣೆ ಮಾಡಬೇಕು ಎಂದು ಸಂಪಂಗಿ ಮನವಿ ಮಾಡಿದ್ದರು.
ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾ. ಬಿವಿ ಪಿಂಟೋ ಅವರು ಮನವಿಯನ್ನು ಪುರಸ್ಕರಿಸಿ, ಲಂಚ ಪ್ರಕರಣ ವಿಚಾರಣೆಗೆ 15 ದಿನಗಳ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ.
ಇದರಿಂದಾಗಿ ಅಕ್ಟೋಬರ್ 28ರಂದು ಪರಪ್ಪನ ಅಗ್ರಹಾರ ಜೈಲಿನ ದರ್ಶನ ಮಾಡಿ ಮೂರು ದಿನ ಕಳೆದು ಜಾಮೀನು ಪಡೆದು ಹೊರ ಬಂದಿರುವ ವೈ ಸಂಪಂಗಿ ಗೆಲುವಿನ ನಗೆ ಬೀರುತ್ತಿದ್ದಾರೆ. ಯಡಿಯೂರಪ್ಪ ಜೈಲಿನಿಂದ ಹೊರ ಬೀಳುತ್ತಿದ್ದಂತೆ ಅವರ ಬೆಂಬಲಿಗರ ಲಕ್ ಕೂಡಾ ತಿರುಗಿದೆ.












Click it and Unblock the Notifications