ಸಹಕಾರ ನಗರ ಅಕ್ರಮ ಬಿಡಿಎ, ಬಿಬಿಎಂಪಿ ಜುಗಲ್ ಬಂದಿ

ಗೃಹ ಸಚಿವರ ವಿರುದ್ಧ ಪೊಲೀಸ್ ಇಲಾಖೆಯಿಂದ ತನಿಖೆ ಸಾಧ್ಯವಾಗದ ಕಾರಣ 3 ತಿಂಗಳ ಹಿಂದೆ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಾಗಿದೆ. ಅವ್ಯವಹಾರದ ಕುರಿತು ತನಿಖೆ ನಡೆಸಬೇಕು. ಅಶೋಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು ಎಂದು ಜಗದೀಶ್ ಕೋರಿದ್ದಾರೆ.
ಬಿಡಿಎ ಪ್ಲಸ್ ಬಿಬಿಎಂಪಿ=ಡಬ್ಬಲ್ ಅಕ್ರಮ: ಸಹಕಾರ ನಗರ ಬಡಾವಣೆ ನಿರ್ಮಾಣಕ್ಕಾಗಿ ಆರ್‌ಎಂಎಸ್ ಗೃಹ ನಿರ್ಮಾಣ ಸಂಘಕ್ಕೆ ಸರ್ಕರದಿಂದ ಜಮೀನು ಮಂಜೂರು ಮಾಡಲಾಗಿತ್ತು.
ಬಡಾವಣೆಯಲ್ಲಿ ಉದ್ಯಾನವನ ಹಾಗೂ ಆಟದ ಮೈದಾನಕ್ಕೆ ಎಂದು ಪ್ರತ್ಯೇಕ ಸ್ಥಳ ಮೀಸಲಿರಿಸಲಾಗಿದೆ. ಆದರೆ ಈ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಸುಮಾರು 1000 ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗಿದೆ.
ಸುಮಾರು 2 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದರೂ ಯಲಹಂಕ ವಲಯದ ಬಿಬಿಎಂಪಿ ಕಣ್ಮುಚ್ಚಿ ಕುಳಿತಿದೆ. ನಿವೇಶನ ಹಂಚಿಕೆ, ಗೃಹ ನಿರ್ಮಾಣ ಕಾಮಗಾರಿಯಲ್ಲಿ ಸುಮಾರು 2000 ಕೋಟಿ ರೂ. ಅವ್ಯವಹಾರ ನಡೆದಿರುವ ಅಂದಾಜಿದೆ.
ಬಿಡಿಎ ಅಧಿಕಾರಿಗಳು ಹಾಗೂ ಬಿಬಿಎಂಪಿಯ ಕಂದಾಯ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳು ಈ ಹಗರಣದಲ್ಲಿ ಪಾಲ್ಗೊಂಡಿದ್ದಾರೆ. ಗೃಹ ಸಚಿವ ಆರ್ ಅಶೋಕ್ ಅವರು ಭೂ ಒತ್ತುವರಿ ಕೇಸ್ ಬಗ್ಗೆ ಲೋಕಾಯುಕ್ತ ಸಂಸ್ಥೆ ಕೂಡಲೇ ತನಿಖೆ ನಡೆಸಬೇಕಿದೆ ಎಂದು ಜಗದೀಶ್ ಹೇಳಿದ್ದಾರೆ.












Click it and Unblock the Notifications