ಕಾಂಗ್ರೆಸ್ಸಿನ ನೂರಾರು ಜನಾರ್ದನ ರೆಡ್ಡಿಗಳ ಬಗ್ಗೆ ಕುಮಾರಣ್ಣನ ಬಳಿ ದಾಖಲೆ
ಸಿಂಧನೂರು,
ನ.16: ಗಣಿ ಅಕ್ರಮವನ್ನು ಜನಾರ್ದನ ರೆಡ್ಡಿ ಮಾತ್ರ ಮಾಡಿಲ್ಲ. ಕಾಂಗ್ರೆಸ್ಸಿನಲ್ಲಿ ರೆಡ್ಡಿಯನ್ನು ಮೀರಿಸುವಂತಹ ನೂರಾರು ಅದಿರು ಕಳ್ಳರಿದ್ದಾರೆ. ಕೇಂದ್ರ ಸರಕಾರ ಸಿಬಿಐ ತನಿಖೆ ನಡೆಸುವುದಾದರೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಲು ತಾವು ಸಿದ್ದ ಎಂದು ಮಾ.ಮು. ಕುಮಾರಸ್ವಾಮಿ ಭರ್ಜರಿ ಸವಾಲ್ ಎಸೆದಿದ್ದಾರೆ. id="toptextpromo">ಜೆಡಿಎಸ್
ರಾಜ್ಯಾಧ್ಯಕ್ಷರೂ ಆದ ಎಚ್. ಡಿ. ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಮಂಗಳವಾರ ಸಿಡಿಸಿದ ಬಾಂಬ್ ಇದು. ಯಡ್ಡಿ-ರೆಡ್ಡಿ ಗ್ಯಾಂಗ್ ಈ ಬಾರಿ ದೀಪಾವಳಿಯನ್ನು ಕಗ್ಗತ್ತಲಲ್ಲಿ ಕಳೆಯುವಂತೆ ಮಾಡಿದ ಕುಮಾರಣ್ಣನ ಬತ್ತಳಿಕೆಯಲ್ಲಿ ಇನ್ನೂ ಯಾವೆಲ್ಲ ಬಾಂಬು, ಬಾಣ ಬಿರುಸುಗಳಿವೆಯೋ!? id='are-slot-1' class='oiad oi-axt oiadv'> id='top-searched-articles'>ರೆಡ್ಡಿಗಳು
ಮಾತ್ರವೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂಬಂತೆ ಕಾಂಗ್ರೆಸ್ ನಾಯಕರು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ಸಿನಲ್ಲಿ ನೂರಾರು ಜನಾರ್ದನ ರೆಡ್ಡಿಗಳು ವಿಜೃಂಭಿಸುತ್ತಿದ್ದಾರೆ. ಆ ಪಕ್ಷದ ಸಚಿವ ಮಹೋದಯರೇ ಭಾರಿ ಪ್ರಮಾಣದಲ್ಲಿ ಗಣಿ ಲೂಟಿ ಮಾಡಿರುವ ಬಗ್ಗೆ ಮಾಹಿತಿ ಇದೆ. ಸರಕಾರಿ ಸ್ವಾಮ್ಯದ MSILನಿಂದಲೇ ಅದಿರು ಕಳ್ಳಸಾಗಣೆ ಮಾಡಿದ್ದಾರೆ. ಈ ಕುರಿತು ಎಲ್ಲ ದಾಖಲೆಗಳೂ ನನ್ನಲ್ಲಿವೆ. ಸಿಬಿಐ ಬಯಸಿದರೆ ಅದನ್ನು ಒಂದೊಂದಾಗಿ ಒದಗಿಸುವೆ ಎಂದು ಕುಮಾರಣ್ಣ ಅಕ್ರಮ ಗಣಿ ಚಕ್ರ ಉರುಳಿಸಿದ್ದಾರೆ.











Click it and Unblock the Notifications