ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ಮಂಜೂರು

ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿವಿ ಪಿಂಟೋ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ತೀರ್ಪನ್ನು ಬುಧವಾರ(ನ.16)ಕ್ಕೆ ಕಾಯ್ದಿರಿಸಿತ್ತು.
ಬಾಷಾ ಸಲ್ಲಿಸಿದ್ದ 1,4 ಹಾಗೂ 5 ನೇ ದೂರಿಗೆ ಸಂಬಂಧಿಸಿದಂತೆ ಮಂಗಳವಾರ ಬಹುತೇಕ ವಿಚಾರಣೆ ಮುಗಿದಿತ್ತು. ಆದರೆ, ಕೋರ್ಟ್ ಸಮಯ ಮುಗಿದಿದ್ದರಿಂದ ಬುಧವಾರ ತೀರ್ಪು ಪ್ರಕಟಿಸುವುದಾಗಿ ನ್ಯಾ. ಪಿಂಟೋ ಪ್ರಕಟಿಸಿದ್ದರು.
3 ಹಾಗೂ 4 ನೇ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಪ್ರಸ್ತುತ ನಿರೀಕ್ಷಣಾ ಜಾಮೀನಿನ ಬಗ್ಗೆ ಸಿರಾಜಿನ್ ಬಾಷಾ ವಕೀಲರು ಆಕ್ಷೇಪಣೆ ಸಲ್ಲಿಸದ ಕಾರಣ, ಯಡಿಯೂರಪ್ಪ ಅವರಿಗೆ ಜಾಮೀನು ಸುಲಭವಾಗಿ ಮಂಜೂರಾಗಿದೆ.
ಆದರೆ, ಸಾಕ್ಷ್ಯ ನಾಶಪಡಿಸದಂತೆ ಯಡಿಯೂರಪ್ಪ ಅವರಿಗೆ ನ್ಯಾ. ಪಿಂಟೋ ಎಚ್ಚರಿಸಿದ್ದಾರೆ. 2 ಲಕ್ಷ ರೂ ಮೊತ್ತದ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಬೇಕು. ವಿದೇಶಕ್ಕೆ ಹಾರುವಂತಿಲ್ಲ. ಪ್ರತಿ ವಿಚಾರಣೆ ವೇಳೆ ಕೋರ್ಟ್ ಗೆ ಹಾಜರಾಗಬೇಕು ಎಂದು ನ್ಯಾ. ಪಿಂಟೋ ಸೂಚಿಸಿದ್ದಾರೆ.












Click it and Unblock the Notifications