ಬಿಎಸ್ ಯಡಿಯೂರಪ್ಪ ಒಬ್ಬ ಹೇಡಿ: ಎಚ್ ಡಿ ಕುಮಾರಸ್ವಾಮಿ
ಸಿಂಧನೂರು,
ನ.16: ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವ ಮಾ.ಮು. ಯಡಿಯೂರಪ್ಪ ಹೇಡಿತನದ ಕೆಲಸ ಮಾಡುತ್ತಿದ್ದಾರೆ ಎಂದು ಮತ್ತೊಬ್ಬ ಮಾ.ಮು. ಕುಮಾರಸ್ವಾಮಿ ಕಿಡಿಕಾರಿದ್ದಾರೆ. id="toptextpromo">ತಮ್ಮ
ತಪ್ಪಿಗೆ ಜೈಲು ಸೇರಿದ್ದರೂ ಅದನ್ನು ಮತ್ತೊಬ್ಬರ ಮೇಲೆ ಹಾಕುತ್ತಿದ್ದಾರೆ. ಕೋಟಿಗಟ್ಟಲೆ ಹಣ ಲೂಟಿ ಮಾಡಿದ್ದರೂ ಅವರ ಕುಟುಂಬ ಇನ್ನೂ ಸೆರೆಮನೆ ವಾಸದಿಂದ ದೂರ ಉಳಿದಿದೆ. ಭ್ರಷ್ಟರಿಗೆ ತಕ್ಕ ಶಾಸ್ತಿ ಆಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಎಚ್. ಡಿ. ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಮಂಗಳವಾರ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಮಾಜಿ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳ ಕುರಿತು ದಾಖಲೆ ಹೊಂದಿದ್ದೇನೆ. ಬೆಂಗಳೂರಿಗೆ ಬಂದು ಮಾಧ್ಯಮಗಳ ಮುಂದೆ ಇನ್ನೆರಡು ದಿನಗಳಲ್ಲಿ ದಾಖಲೆ ಸಮೇತ ಇದನ್ನು ಬಿಡುಗಡೆ ಮಾಡಲಿದ್ದೇನೆ' ಎಂದು ಕುಮಾರಸ್ವಾಮಿಗೆ ಯಡಿಯೂರಪ್ಪ ನಿನ್ನೆಯಷ್ಟೇ ಎಚ್ಚರಿಕೆಯ ಸಂದೇಶ ರವಾನಿಸಿದ್ದರು ಎಂಬುದು ಗಮನಾರ್ಹ.











Click it and Unblock the Notifications