ಕಚೇರಿಯಲ್ಲಿ ಕುಳಿತೇ ಅಕ್ರಮ ವರದಿ ಸಿದ್ದಪಡಿಸಿದ ಹೆಗ್ಡೆ ಕ್ಷಮೆಯಾಚಿಸಲಿ
ಶಿವಮೊಗ್ಗ,
ನ.15: ತಮ್ಮ ಕಚೇರಿಯಲ್ಲಿ ಕುಳಿತೇ ಅಕ್ರಮ ಗಣಿಗಾರಿಕೆ ವರದಿ ಸಿದ್ದಪಡಿಸಿದ ಶ್ರೇಯಸ್ಸು ಲೋಕಾಯುಕ್ತರಾಗಿದ್ದಾಗ ನ್ಯಾ.ಹೆಗ್ಡೆಗೆ ಸಲ್ಲುತ್ತದೆ ಎಂದು ಮಾ. ಮು. ಯಡಿಯೂರಪ್ಪ ಘರ್ಜಿಸಿದ್ದಾರೆ. id="toptextpromo">ಅಕ್ರಮ
ಗಣಿಗಾರಿಕೆ ಬಗ್ಗೆ ವರದಿ ನೀಡಿ ಎಂದರೆ ನಿಮ್ಮ ಕಣ್ಣಿಗೆ ಬಿದ್ದಿದ್ದು ರೆಡ್ಡಿ ಸೋದರರು ಮತ್ತು ಯಡಿಯೂರಪ್ಪ ಮಾತ್ರ. ಆ ವರದಿಯನ್ನೂ ಕಚೇರಿಯಲ್ಲೇ ಕುಳಿತು ಸಿದ್ಧಪಡಿಸಿದ್ದೀರಿ ಎಂದು ಬಿ.ಎಸ್. ಯಡಿಯೂರಪ್ಪ ಹೆಗ್ಡೆ ಅವರನ್ನು ತೀವವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ನಿಮ್ಮ
ಕಚೇರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅಂದು ನಿಮ್ಮ ಜತೆಗಿದ್ದ ಅಧಿಕಾರಿ ಹೇಳಿದ್ದಾರೆ. ಲೋಕಾಯುಕ್ತ ಮುಖ್ಯಸ್ಥರಾಗಿ ಯಾವುದೇ ಕ್ರಮ ಕೈಗೊಳ್ಳದ ನಿಮಗೆ ವಿಧಾನಸೌಧದಲ್ಲಿ ಕುಳಿತವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಈ ಬಗ್ಗೆ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಜನ ನಿಮ್ಮನ್ನು ಕ್ಷಮಿಸುವುದಿಲ್ಲ' ಎಂದು ಹೆಗ್ಡೆ ಅವರನ್ನು ಯಡಿಯೂರಪ್ಪ ಎಚ್ಚರಿಸಿದ್ದಾರೆ.











Click it and Unblock the Notifications