ಎಲ್ಲರೂ ಅಮೃತ ಹೀರಿದರು ನಾನು ವಿಷ ಕುಡಿದೆ : ಯಡ್ಡಿ

Yeddyurappa speaks his heart out in Shikaripura
ಶಿಕಾರಿಪುರ, ನ. 14 : "ನಾನು ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದೆ. ಎಲ್ಲರಿಗೂ ಅಮೃತ ಕುಡಿಸಿದೆ. ಆದರೆ ವಿಷ ಕುಡಿಯುವ ಸಂದರ್ಭ ಬಂದಾಗ ಮಾತ್ರ, ಎಲ್ಲ ವಿಷವನ್ನೂ ನಾನೇ ಕುಡಿದೆ. ಇಲ್ಲಿ ಎಲ್ಲರೂ ನನ್ನನ್ನು ಬಲಿಪಶು ಮಾಡಲು ಯತ್ನಿಸುತ್ತಿದ್ದಾರೆ. ಸಮಯ ಬಂದಾಗ ಎಲ್ಲ ರಹಸ್ಯಗಳನ್ನು ಬಹಿರಂಗಪಡಿಸುವೆ."

ಈ ಆಕ್ರೋಶ, ದುಃಖ ಭರಿತ ಭಾವೋದ್ವೇಗದ ಮಾತುಗಳನ್ನು ಆಡಿದವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ. ಭೂ ಹಗರಣದಲ್ಲಿ ಸಿಲುಕಿ ಪರಪ್ಪನ ಜೈಲು ಸೇರಿ, ಜೈಲಿನಿಂದ ಹೊರಬಂದ ನಂತರ ರಾಜ್ಯ ಪ್ರವಾಸ ಮಾಡುತ್ತಿರುವ ಯಡಿಯೂರಪ್ಪ ಇಂದು ತಮ್ಮ ತವರಿನ ಜನತೆಯ ಮುಂದೆ ಹೃದಯಾಂತರಾಳದ ಮಾತುಗಳನ್ನು ಆಡಿದರು.

ರಾಜ್ಯದ ಜನತೆಗಾಗಿ ನಾನು ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಅದೇ ಲಕ್ಷಾಂತರ ಜನತೆ ನಾನು ಜೈಲಿನಲ್ಲಿದ್ದಾಗ ದೀಪಾವಳಿಯನ್ನು ಕೂಡ ಆಚರಿಸಲಿಲ್ಲ. ರಾಜ್ಯದ ಜನ ನನ್ನನ್ನು ಎಂದೂ ಕೈಬಿಡುವುದಿಲ್ಲ. ಬದುಕಿರುವವರೆಗೆ ಅವರಿಗೆ ಋಣಿಯಾಗಿರುತ್ತೇನೆ. ನನಗಾಗಿ ಜನತೆ ಕಣ್ಣೀರು ಹಾಕುವ ಅಗತ್ಯ ಇಲ್ಲ ಎಂದು ಭಾವುಕರಾಗಿ ನುಡಿದರು.

ಮಾತಿನ ಓಘದಲ್ಲಿ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ತಾವು ಜೈಲಲ್ಲಿದ್ದಾಗ ಪಾರ್ಟಿ ಆಚರಿಸಿಕೊಂಡ ತಮ್ಮ ಪಕ್ಷದ ಕೆಲ ನಾಯಕರನ್ನೂ ಪರೋಕ್ಷವಾಗಿ ಟೀಕಿಸಿದರು.

ಲೋಕಾಯುಕ್ತ ಸಂಸ್ಥೆ ಮೇಲಿಂದ ಇಳಿದುಬಂದಂತೆ ವರ್ತಿಸುತ್ತಿದೆ. ನ್ಯಾ. ಹೆಗ್ಡೆಯವರಂತೂ ವಿಧಾನಸೌಧದ ಎಲ್ಲರನ್ನೂ ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿದ್ದರು. ಗಣಿ ಹಗರಣದಲ್ಲಿ ಹಲವಾರು ನಾಯಕರ, ಅಧಿಕಾರಿಗಳ ಕೈವಾಡವಿದೆ. ಸಮಯ ಬಂದಾಗ ಎಲ್ಲ ಬಯಲು ಮಾಡುವೆ ಎಂದು ಶಿಕಾರಿಪುರದಲ್ಲಿ ಯಡಿಯೂರಪ್ಪ ಗುಡುಗಿದರು.

ಕೊನೆಯಲ್ಲಿ, ನನ್ನ ವಿರುದ್ಧ ಸುಳ್ಳು ಕೇಸು ಹಾಕಿದವರಿಗೆ ಪಶ್ಚಾತ್ತಾಪವಾಗುತ್ತದೆ. ನಾನು ನಿರಪರಾಧಿಯಾಗಿ ಹೊರಬರುತ್ತೇನೆ. ಏನೇ ಆಗಲಿ ಬಿಜೆಪಿಯನ್ನಂತೂ ಬಿಡುವುದಿಲ್ಲ. ಬಿಡುವ ಪ್ರಶ್ನೆಯೇ ಇಲ್ಲ. ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವ ವಿಶ್ವಾಸವಿದೆ ಎಂದು ಅವರು ನುಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+