ಡಿಸಿ ಪೊನ್ನುರಾಜ್ ಗೆ ಫುಡ್ ಕೋರ್ಟ್ ಕಲ್ಪನೆ ಬಂದಿದ್ದು ಹೀಗೆ?

ಆದರೆ, ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಿದ್ದಂತೆ ತೊಂದರೆಗಳು ಹೆಚ್ಚಾಗತೊಡಗಿದವು. ಹೀಗೆ ಒಂದು ದಿನ ತಿಂಡಿ ಗಾಡಿಗಳ ವ್ಯಾಪಾರಸ್ಥರು ಮೇಲೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಜೊತೆಗೆ ಬೀದಿ ಬದಿ ವ್ಯಾಪಾರಿಗಳಿಂದ ಉಂಟಾಗುತ್ತಿದ್ದ ಗಲೀಜು ವಾತಾವರಣದ ಬಗ್ಗೆ ಸಮೀಪ ಶಾಲಾ ಕಾಲೇಜುಗಳು ದೂರು ನೀಡಿದ್ದವು.
ಇದನ್ನು ನೋಡಿದ ಜಿಲ್ಲಾಧಿಕಾರಿ ಪೊನ್ನುರಾಜ್ ಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಎನಿಸಿತು. 30 ಅಡಿಗಿಂತ ಕಡಿಮೆ ಇರುವಂತಹ ರಸ್ತೆಗಳಲ್ಲಿ ಈ ರೀತಿಯ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದ ಸುಪ್ರೀಂಕೋರ್ಟ್ ಆದೇಶದ ನೆರವು ಪಡೆದು, ಫುಡ್‌ಕೋರ್ಟ್ ಆರಂಭಿಸಿ ಶುಚಿತ್ವಕ್ಕೆ ಮಹತ್ವ ನೀಡಲು ಪೊನ್ನುರಾಜ್ ಮುಂದಾದರು.
ಡಿಸಿ ಪೊನ್ನು ಏನು ಹೇಳುತ್ತಾರೆ?: ಈ ರಸ್ತೆಯಲ್ಲಿ ಶಿಕ್ಷಣ ಸಂಸ್ಥೆಗಳಿವೆ. ನಗರಸಭೆ ಇದೆ, ಇದರ ಜೊತೆಗೆ ಗಾಂಧಿ ಪಾರ್ಕ್ ಕೂಡ ಇದ್ದು, ಇಲ್ಲಿ ಪ್ರತಿನಿತ್ಯ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ ಇದರಿಂದಾಗಿ ಈ ರಸ್ತೆಯಲ್ಲಿ ಸಾಕಷ್ಟು ಅನನುಕೂಲಗಳು ಉಂಟಾಗಿದ್ದು, ಸ್ವಚ್ಛತೆ ಸಂಪೂರ್ಣ ಹಾಳಾಗಿದೆ. ಸ್ವಚ್ಛತೆ ಕಾಪಾಡಲು ಆಗುತ್ತಿಲ್ಲ.
ಸಂಜೆ 6 ಗಂಟೆ ನಂತರ ವ್ಯಾಪಾರ ಪ್ರಾರಂಭಿಸಿ 11 ಗಂಟೆಯೊಳಗೆ ವ್ಯಾಪಾರವನ್ನು ಮುಗಿಸಬೇಕು. ಜೊತೆಗೆ ಪ್ರತಿಯೊಬ್ಬ ತಳ್ಳು ಗಾಡಿಯವರು ಕಸದ ಬುಟ್ಟಿ ಇಡಬೇಕು. ಜೊತೆಗೆ ಕಸದ ಬುಟ್ಟಿಗೆ ಹಾಕಿಸುವ ಜವಾಬ್ದಾರಿ ಮಾಲೀಕರದೇ ಆಗಿದೆ. ಇದನ್ನು ಮೀರಿದರೆ ಅಂಗಡಿಗಳನ್ನು ಅಲ್ಲಿಂದ ಖಾಲಿ ಮಾಡಿಸಲಾಗುವುದು ಎಂದು ಹೇಳಿದರು.












Click it and Unblock the Notifications