ಮುಂಬೈನಲ್ಲಿ ಡಾನ್ ದಾವೂದ್ ಇಬ್ರಾಹಿಂ ದಫನ್ ಡೌಟ್

ತನ್ನ ಮರಣಾನಂತರ ಹುಟ್ಟೂರಾದ ರತ್ನಗಿರಿ ಜಿಲ್ಲೆಯ ಖೇಡ್ ಅಥವಾ ಬಾಲ್ಯ ಜೀವನ ಕಳೆದ ಮುಂಬೈ ಮಹಾ ನಗರದಲ್ಲಿ ತನ್ನನ್ನು ದಫನ್ ಮಾಡಬೇಕು ಎಂದು ದಾವೂದ್ ಸೂಚಿಸಿದ್ದಾನೆ ಎಂದು ಮುಂಬೈ ಕ್ರೈಂ ಪತ್ರಿಕೆಗಳು ವರದಿ ಮಾಡಿತ್ತು.
ವರದಿ ಪ್ರಕಾರ 1982ರಲ್ಲೇ ತನ್ನ ಸಮಾಧಿ ಸ್ಥಳವನ್ನು ದಾವೂದ್ ನಿಗದಿ ಮಾಡಿದ್ದಾನಂತೆ. ತಾಯಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ದಾವೂದ್ ಗೆ ತನ್ನ ಅಮ್ಮಿ ಪಕ್ಕದಲ್ಲೇ ಇರಬೇಕು ಎಂಬುದು ಮಹದಾಸೆ.
ಹಾಗಾಗಿ ಮುಂಬೈನ ಮರೈನ್ ಲೈನ್ ಬಳಿಯ ಚಂದನ್ ವಾಡಿಯ ಬಾಡ ಕಬ್ರಸ್ತಾನ್ ನಲ್ಲಿ ಸ್ಥಳ ಕಾಯ್ದಿರಿಸಿದ್ದಾನೆ ಎಂದು ದಾವೂದ್ ಆಪ್ತರು ಹೇಳಿಕೊಂಡಿದ್ದಾರೆ. 30 ವರ್ಷಗಳ ಹಿಂದೆ ಸುಮಾರು 5,000 ರೂ ನೀಡಿ ಈ ಸ್ಥಳವನ್ನು ಪಡೆದಿದ್ದಾನೆ.
ಅಂದಿನಿಂದ ಇಂದಿನವರೆಗೂ ಸಮಾಧಿಗೆ ನಿಗದಿಯಾಗಿರುವ ಸ್ಥಳವನ್ನು ಕಾಯ್ದುಕೊಂಡು ಬರಲಾಗಿದೆ. ಇದಕ್ಕೆ ಬೇಕಾದ ಹಣಕಾಸು ನೆರವು ನಿಗದಿತವಾಗಿ ತಲುಪುತ್ತಿರುತ್ತದೆ.
ಬಾಡ ಕಬ್ರಸ್ತಾನ್ ನಲ್ಲಿ ದಾವೂದ್ ನ ಅಮ್ಮ ಅಮೀನ್ ಬಿ, ತಂದೆ ಇಬ್ರಾಹಿಂ, ಸೋದರ ಸಬೀರ್ ಹಾಗೂ ಸೋದರ ಸಂಬಂಧಿ ಇಬ್ರಾಹಿಂ ಪಾರ್ಕರ್ ಎಲ್ಲರನ್ನು ಇಲ್ಲೇ ದಫನ್ ಮಾಡಲಾಗಿದೆ.
ಆದರೆ, ದಾವೂದ್ ತಮ್ಮ ನೂರಾ ಹಾರ್ಟ್ ಅಟ್ಯಾಕ್ ನಿಂ ಸತ್ತಾಗ ಆತನ ಶವವನ್ನು ಮುಂಬೈ ಕರೆತರಲಾಗದೆ ಕರಾಚಿಯಲ್ಲಿ ಗುಪ್ತವಾಗಿ ದಫನ್ ಮಾಡಲಾಗಿತ್ತು.
ದಾವೂದ್ ಗೂ ಕೂಡಾ ಇದೇ ಪರಿಸ್ಥಿತಿ ಒದಗಿ ಬರಲಿದೆ. ದಾವೂದ್ ಸತ್ತಾಗ ಕರಾಚಿ ಅಧಿಕಾರಿಗಳು ಈ ಸುದ್ದ ಹೊರಗೆ ಹರಡದಂತೆ ಎಚ್ಚರಿಕೆ ವಹಿಸುತ್ತಾರೆ. ಒಂದು ವೇಳೆ ಸುದ್ದಿ ಲೀಕ್ ಆದರೆ, ದಾವೂದ್ ಕರಾಚಿಯಲ್ಲೇ ಇದ್ದ ಎಂಬುದಕ್ಕೆ ಬಲವಾದ ಪುರಾವೆ ಸಿಕ್ಕಿದ್ದಂತಾಗುತ್ತದೆ. ದಾವೂದ್ ಕೂಡಾ ನೂರಾನಂತೆ ಕರಾಚಿಯಲ್ಲೆ ದಫನ್ ಆಗಬೇಕಾಗುತ್ತದೆ.












Click it and Unblock the Notifications