ಶ್ರೀರಾಮುಲು ವಿರುದ್ಧ ಪ್ರಚಾರಕ್ಕೆ ಯಡಿಯೂರಪ್ಪ ನಕಾರ

ಪಕ್ಷೇತರ ಅಭ್ಯರ್ಥಿ ಬಿ.ಶ್ರೀರಾಮುಲು ವಿರುದ್ಧ ಸ್ಟಾರ್ ಪ್ರಚಾರಕ ಯಡಿಯೂರಪ್ಪ ಅವರನ್ನು ನಿಲ್ಲಿಸಿ ಗಾದಿ ಲಿಂಗಪ್ಪ ಅವರನ್ನು ಗೆಲ್ಲಿಸುವ ಆಸೆ ಹೊತ್ತಿದ್ದ ಈಶ್ವರಪ್ಪ ಅಂಡ್ ಸದಾನಂದ ಗೌಡರಿಗೆ ಯಡಿಯೂರಪ್ಪ ಅವರು ಸರಿಯಾಗಿ ಕೈ ಕೊಟ್ಟಿದ್ದಾರೆ.
ಕೆಲ ವೈಯಕ್ತಿಕ ಕಾರಣಗಳಿಂದ ನಾನು ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಲು ಆಗುತ್ತಿಲ್ಲ. ನನ್ನ ಪರವಾಗಿ ನನ್ನ ಬೆಂಬಲಿಗರು ಗಾದಿ ಲಿಂಗಪ್ಪ ಅವರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದು ಯಡಿಯೂರಪ್ಪ ಅವರು ಹೇಳಿದರು.
ಹುಬ್ಬಳ್ಳಿಯಲ್ಲಿ ಖಾಸಗಿ ಸಮಾರಂಭಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ ಇನ್ನೊಂದು ಮಾತು ಎಲ್ಲರ ಗಮನ ಸೆಳೆಯಿತು. ಮುಂಬರುವ ಚುನಾವಣೆಯಲ್ಲಿ ನಡೆಸುವ ಅಬ್ಬರದ ಪ್ರಚಾರಕ್ಕೆ ಹೆದರಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೆಲಕಚಲಿದೆ ಎಂದರು.
ಸದ್ಯಕ್ಕೆ ಉಪ ಚುನಾವಣೆ ಬಿಟ್ಟರೆ ಬೇರೆ ಯಾವ ಚುನಾವಣೆ ಹತ್ತಿರದಲ್ಲಿಲ್ಲ. ಯಡಿಯೂರಪಪ್ ಅವರೇನಾದರೂ ಮಧ್ಯಂತರ ಚುನಾವಣೆ ತಯಾರಿ ನಡೆಸಿದ್ದಾರಾ ಎಂಬ ಅನುಮಾನ ಎಲ್ಲರನ್ನು ಕಾಡತೊಡಗಿದೆ.












Click it and Unblock the Notifications