ವರ್ಗಾವಣೆ ಆರೋಪಕ್ಕೆ ಸದಾನಂದ ಗೌಡ ತಾಜಾ ಉತ್ತರ

ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿ ಹಿರಿಯ ರಾಜಕಾರಣಿ (ಎಚ್ ಡಿ ದೇವೇಗೌಡ) ಅವರು ಕರೆ ಮಾಡಿ ತೋರಿಸಿದ ಕಳಕಳಿ ಹಾಗೂ ನಂತರ ಗಾಂವ್ಕರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರ ಆಧಾರಿಸಿ ವರ್ಗಾವಣೆ ಮಾಡಲಾಗಿದೆ. ಗಣಿ ವರದಿಯಲ್ಲಿ ಹೆಸರಿಸಿರುವ ಅಧಿಕಾರಿಗಳನ್ನು ಮಾತ್ರ ವರ್ಗಾ ಮಾಡಲಾಗಿದೆ ಎಂದು ಸದಾನಂದ ಗೌಡರು ಸ್ಪಷ್ಟನೆ ನೀಡಿದರು.
ನೂತನ ಲೋಕಾಯುಕ್ತರ ನೇಮಕಾತಿ ಬಗ್ಗೆ ಸಂಶಯಗಳು ಬಂದಿರುವುದು ನಿಜ. ಈ ಮುಂಚೆ ಅನುಸರಿಸಿದ ಕ್ರಮವನ್ನೇ ಬಳಕೆ ಮಾಡಿದ್ದೇವೆ. ಸರ್ಕಾರಕ್ಕೆ ನಮ್ಮ ಆಯ್ಕೆಯನ್ನು ನೀಡಿ ಆಯ್ಕೆ ಬಗ್ಗೆ ವಿವರಿಸಿದ್ದೇವೆ. ರಾಜ್ಯಪಾಲರ ತೀರ್ಮಾನವೇ ಅಂತಿಮ ಎಂದು ಸದಾನಂದ ಗೌಡರು ಹೇಳಿದರು.
ಸುದ್ದಿಗೋಷ್ಠಿಯುದ್ದಕ್ಕೂ ದೇವೇಗೌಡರ ಪ್ರಕರಣದ ಪ್ರಸ್ತಾಪ ಮಾಡಿದ ಸದಾನಂದ ಗೌಡರು ಒಮ್ಮೆ ಕೂಡಾ ಅವರ ಹೆಸರು ಹೇಳದೆ 'ಮಾಜಿ ಪ್ರಧಾನಿಗಳು', 'ಹಿರಿಯ ರಾಜಕಾರಣಿ' ಎಂದು ಸಂಬೋಧಿಸಿದ್ದು ವಿಶೇಷ. ಲೋಕಾಯುಕ್ತ ಎಡಿಜಿಪಿ ಜೀವನ್ ವಿ. ಗಾಂವ್ಕರ್ ವರ್ಗಾವಣೆಯಲ್ಲಿ ನಮ್ಮ ಪಾತ್ರವೇನು ಇಲ್ಲ ಎಂದು ಸದಾನಂದ ಗೌಡರು ಕೈ ತೊಳೆದು ಕೊಂಡಿದ್ದಾರೆ.












Click it and Unblock the Notifications