ಬಿಜೆಪಿ ಕಾರ್ಯಕರ್ತರಿಂದಲೇ ವರುಣ್ ಮೇಲೆ ಶೂ ಎಸೆತ!

ನವಾಬ್‌ಗಂಜ್‌ನಲ್ಲಿ ಆಯೋಜಿಸಿದ್ದ ನಿಗದಿತ ಕಾರ್ಯಕ್ರಮಕ್ಕೆ ಹೋಗಲು ಸಂಸದ ವರುಣ್ ಗಾಂಧಿ ನಿರಾಕರಿಸಿದರು. ತಕ್ಷಣವೇ ಸಿಟ್ಟಿಗೆದ್ದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ, ಅವರ ಮೇಲೆ ಶೂ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನವಾಬ್‌ಗಂಜ್‌ನಲ್ಲಿ ಗುರು ಗೋವಿಂದ್ ಸಿಂಗ್ ಉದ್ಯಾನವನ ಲೋಕಾರ್ಪಣೆ ಹಾಗೂ ನಾಗಪಂಚಮಿ ಮೇಳವನ್ನು ಉದ್ಘಾಟಿಸುವ ಕಾರ್ಯಕ್ರಮಕ್ಕೆ ವರುಣ್ ಗೈರುಹಾಜರಾಗಿದ್ದೆ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ.
ನಿಗದಿಯಂತೆ ನವಾಬ್‌ಗಂಜ್‌ಗೆ ಆಗಮಿಸಿದ ವರುಣ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದು, ಕಾರ್ಯಕರ್ತರನ್ನು ಕೆರಳಿಸಿತು ಎಂದು ನಗರ ಪಾಲಿಕೆ ಅಧ್ಯಕ್ಷ ಕುನ್ವಾರ್ ರವೀಂದ್ರ ಸಿಂಗ್ ರಾಥೋರ್ ತಿಳಿಸಿದ್ದಾರೆ.












Click it and Unblock the Notifications