ಹಿಂದೂಗಳ ಮತಾಂತರ ಮಾಡಿಸುವವರಿಗೆ ಮರಣದಂಡನೆ: ತೊಗಾಡಿಯ

death-sentence-for-hindu-caste-conversion-togadia
ಅಹಮದಾಬಾದ್, ನ.11: ಹಿಂದೂಗಳನ್ನು ಇತರ ಧರ್ಮಗಳಿಗೆ ಮತಾಂತರ ನಡೆಸಲು ಯತ್ನಿಸುವವರಿಗೆ ಮರಣ ದಂಡನೆ ವಿಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯ ಆಗ್ರಹಿಸಿದ್ದಾರೆ. ಅಖಿಲ ಭಾರತೀಯ ಧರ್ಮ ಪ್ರಸಾರ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.

ನಗರದ ಹೊರವಲಯದಲ್ಲಿರುವ ಪಿರಾನ ದರ್ಗಾದ ಸಮೀಪ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೇಶಾದ್ಯಂತದಿಂದ ಆಗಮಿಸಿದ್ದ ವಿಎಚ್‌ಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಕ್ರೀದ್ ಆಚರಣೆಯೂ ಇದ್ದ ಹಿನ್ನೆಲೆಯಲ್ಲಿ ಸಮಾವೇಶದಿಂದ ಪೊಲೀಸರು ಹಾಗೂ ಸ್ಥಳೀಯ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ವರದಿಯಾಗಿದೆ. ಆದಾಗ್ಯೂ, ಸಮ್ಮೇಳನ ಶಾಂತಿಯುತವಾಗಿ ಕೊನೆಗೊಂಡಿದೆ.

ಗಮನಾರ್ಹವೆಂದರೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ಹೆಸರನ್ನು ಪ್ರಸ್ತಾಪಿಸದೆ ಅವರ ವಿರುದ್ಧವೂ ತೊಗಾಡಿಯ ಕಿಡಿಗಾರಿದ್ದಾರೆ. ಸದ್ಭಾವನಾ ಮಿಶನ್‌ನಲ್ಲಿ ಮೋದಿ ಮುಸ್ಲಿಮರನ್ನು ಓಲೈಸಿರುವುದನ್ನು ವಿರೋಧಿಸಿದ ತೊಗಾಡಿಯ, ಅಲ್ಪ ಸಂಖ್ಯಾತರನ್ನು ಓಲೈಸುವುದು ಅವರಿಗೂ (ಮೋದಿಗೆ) 'ಫ್ಯಾಶನ್" ಆಗಿ ಬಿಟ್ಟಿತು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+