ನಾಮ್ ಕೆ ವಾಸ್ತೆ ರಾಮ್ ಪ್ರಸಾದ್ ಕಾಂಗ್ರೆಸ್ ಪರ ಇಂದು ನಾಮಪತ್ರ
ಬಳ್ಳಾರಿ,
ನ.11: ಹಲವು ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಭ್ರದಕೋಟೆಯಾಗಿದ್ದ ಬಳ್ಳಾರಿಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ರಾಮ್ ಪ್ರಸಾದ್ ಘೋಷಣೆಯಾಗಿದ್ದು, ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಗ್ರಾಮಾಂತರ ಉಪ ಚುನಾವಣೆ ಕಣದಲ್ಲಿ ಸ್ವತಂತ್ರ ಅಭ್ಯರ್ಥಿ ಶ್ರೀರಾಮುಲು ಮತ್ತು ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಪಕ್ಷದ ಕಚೇರಿಯನ್ನೂ ತೆರೆದಿದ್ದು, ಗೆಲುವಿನ ಲೆಕ್ಕಚಾರ ಹಾಕತೊಡಗಿದೆ. id="toptextpromo">ಗಮನಾರ್ಹವೆಂದರೆ
ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗೆ ಶಾಶ್ವತ ಕಚೇರಿಯೇ ಇಲ್ಲ. ಹೀಗಾಗಿ ಜಿಲ್ಲಾಧ್ಯಕ್ಷರು ಬದಲಾವಣೆಯಾದಾಗ ಪಕ್ಷದ ಕಚೇರಿಯ ವಿಳಾಸವೂ ಬದಲಾಗುವ ಸಂಪ್ರದಾಯವಿದೆ. ಇತ್ತೀಚೆಗೆಷ್ಟೇ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಜೆ.ಎಸ್. ಆಂಜನೇಯಲು ನೇಮಕವಾಗಿದ್ದು, ಅನಂತಪುರಂ ರಸ್ತೆಯ ನೀರಾವರಿ ಇಲಾಖೆ ಸಿಬ್ಬಂದಿ ವಸತಿ ಗೃಹದ ಬಳಿ ಕಚೇರಿಯನ್ನು ತೆರೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಾಂಗ್ರೆಸ್
ಅಭ್ಯರ್ಥಿ ರಾಮ್ ಪ್ರಸಾದ್ ಇಂದು ನಾಮಪತ್ರ ಸಲ್ಲಿಸಲಿದ್ದು, 13 ಮತ್ತು 16 ರಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಪ್ರಚಾರ ನಡೆಸಲಿದ್ದಾರೆ ಎಂದು ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಜನೇಯಲು ಹೇಳಿದರು. 2008 ರಲ್ಲಿ ನಡೆದ ಬಳ್ಳಾರಿ ಮೀಸಲು ವಿಧಾನ ಸಭಾಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ವಿರುದ್ಧ ಸ್ಪರ್ಧಿಸಿ ರಾಮ್ ಪ್ರಸಾದ್ 25716 ಮತಗಳ ಅಂತರದಿಂದ ಸೋಲು ಕಂಡಿದ್ದರು.











Click it and Unblock the Notifications