ಕೇರಳ ಪದ್ಮನಾಭ ಸ್ವಾಮಿಗೆ ಚೆನ್ನೈ ಚಂದ್ರಶೇಖರ ಸ್ಪರ್ಧೆ

Chandrasekara Swamy temple treasure
ಚೆನ್ನೈ, ನ.10: ಕೇರಳದ ಸುಪ್ರಸಿದ್ಧ ಶ್ರೀಪದ್ಮನಾಭಸ್ವಾಮಿ ದೇಗುಲದ ರಹಸ್ಯ ನಿಧಿಯನ್ನು ಮೀರಿಸುವ ಧನಸಂಪತ್ತು ಚೆನ್ನೈನ ದೇಗುಲವೊಂದರಲ್ಲಿ ಇದೆ ಎಂದು ಪತ್ತೆ ಹಚ್ಚಲಾಗಿದೆ.

ಚೆನ್ನೈನ ಹೊಸ ಗುಮ್ಮಿಪೂಂಡಿ ಪ್ರದೇಶದಲ್ಲಿರುವ ಸುಮಾರು 1200 ವರ್ಷ ಹಳೆಯದಾದ ಶ್ರೀಚಂದ್ರಶೇಖರ ಸ್ವಾಮಿ ದೇಗುಲದಲ್ಲಿಯೂ ರಹಸ್ಯ ನಿಧಿ ಇರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಚಂದ್ರಶೇಖರಸ್ವಾಮಿ ದೇಗುಲದಲ್ಲಿ ರಹಸ್ಯ ಉಗ್ರಾಣ ಇರುವ ಬಗ್ಗೆ ಊಹಾಪೋಹ ಸುದ್ದಿಗಳು ಹೆಚ್ಚಾಗುತ್ತಿದ್ದಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಎಚ್ಚೆತ್ತುಕೊಂಡಿದೆ.

6 ಅಡಿ ಅಗಲ ಹಾಗೂ 15 ಅಡಿ ಉದ್ದದ ಈ ಸುರಂಗದ ರಹಸ್ಯ ಬೇಧಿಸಲು ಇಲಾಖೆ ಮುಂದಾಗಿದೆ. ನ.16ರಂದು ಈ ಉಗ್ರಾಣದ ಬಾಗಿಲು ತೆರೆಯುವ ಸಾಧ್ಯತೆಯಿದೆ.

ಶತ ಶತಮಾನಗಳಷ್ಟು ಹಳೆಯದಾದ ಕಲ್ಲಿನ ದೇಗುಲದಲ್ಲಿ ಕ್ರಿ.ಶ.1033 ಕಾಲದ ಶಾಸನಗಳಿವೆ. ಈ ದೇಗುಲದಲ್ಲಿ ಪ್ರಮುಖವಾಗಿ ಪರಮಶಿವ ಹಾಗೂ ದೈವನಾಯಕಿ ಅಮ್ಮ ಅವರ ಪೂಜೆ ನಡೆಯುತ್ತದೆ. ಜೊತೆಗೆ ವಿನಾಯಕ, ಮುರಗ ಕೂಡಾ ಇದ್ದು, ಶಿವ ಇಲ್ಲಿ ಸಂಸಾರ ಸಮೇತ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ.

ಪಾಂಡ್ಯ ಹಾಗು ಚೋಳರ ಶೈಲಿಯ ಮಿಶ್ರಣದಲ್ಲಿರುವ ಈ ಭವ್ಯ ಹಾಗೂ ಪುರಾತನ ದೇಗುಲ ಈ ರಹಸ್ಯ ನಿಧಿಯ ತಾಣವಾಗಿ ಗುರುತಿಸಲ್ಪಡುತ್ತಿದೆ. ಕುಂಭಾಭಿಷೇಕದ ನೆಪದಲ್ಲಿ ದೇಗುಲದ ಜೀರ್ಣೊದ್ಧಾರ ಕಾರ್ಯಕ್ಕೆ ದೇಗುಲದ ಟ್ರಸ್ಟಿಗಳು ಮುಂದಾಗಿರುವುದು ಜನರ ಸಂಶಯವನ್ನು ಹೆಚ್ಚಿಸಿದೆ. ಯಾವುದಕ್ಕೂ ನ.16ರ ನಂತರ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+