ಬಳ್ಳಾರಿ ಚುನಾವಣೆ: ಐಎಎಸ್, ಐಪಿಎಸ್ ಗಳಿಗೆ ಉಳಿಗಾಲವಿಲ್ಲ

ಕರ್ನಾಟಕ ಚುನಾವಣಾ ಆಯೋಗ 7 ಐಪಿಎಸ್ ಹಾಗೂ 2 ಜಿಪಂ ಇಂಜಿನಿಯರ್ ಗಳನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರವು 10 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತಾ ಹೇಳಿದ್ದಾರೆ.
ವರ್ಗಾವಣೆಗೊಂಡವರಲ್ಲಿ ಶ್ರೀರಾಮುಲು ಅವರ ಆಪ್ತರು ಇದ್ದಾರೆ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಅಧಿಕಾರಿಗಳ ವರ್ಗಾವಣೆ ಅವಶ್ಯಕ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಬಳ್ಳಾರಿ ಐಪಿಎಸ್ ಅಧಿಕಾರಿಗಳು:
* ಬಳ್ಳಾರಿ ನಗರ ಡಿವೈಎಸ್ಪಿ ಹನುಮೇಶ್
* ಬಳ್ಳಾರಿ ಗ್ರಾಮೀಣ ಡಿವೈಎಸ್ ಪಿ ಬಾಬು ಕೋಳೇಕರ್
* ಬ್ರೂಸ್ ಪೇಟೆ ಠಾಣೆ ಇನ್ಸ್ ಪೆಕ್ಟರ್ ಬಾಸ್ಕರ್ ರೈ
* ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಎಸ್ಎಸ್ ಹುಲ್ಲೂರು
* ಕೌಲ್ ಬಜಾರ್ ಠಾಣೆ ಇನ್ಸ್ ಪೆಕ್ಟರ್ ಗಿರೀಶ್ ಬೋಜನ್ನವರ್
* ಕೌಲ್ ಬಜಾರ್ ಪಿಎಸ್ ಐ ರುದ್ರಪ್ಪ
* ಅಪರಾಧ ವಿಭಾಗದ ಪಿಎಸ್ ಐ ವೆಂಕಟೇಶ್
ಐಎಎಸ್ ಅಧಿಕಾರಿಗಳು:
* ಡಾ.ರಜನೀಶ್ ಗೋಯಲ್-ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಗಮ.
* ರಮೇಶ್ ಬಿ.ಝಳಕಿ-ಆಯುಕ್ತರು, ಕರ್ನಾಟಕ ಹೌಸಿಂಗ್ ಬೋರ್ಡ್.
* ಶಂಭು ದಯಾಳ್ ಮೀನಾ-ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ.
* ಜಿ.ವಿ.ಕೊಂಗವಾಡ್-ಸರ್ಕಾರದ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗ(ಗಣಿ, ಸಣ್ಣ ಕೈಗಾರಿಕೆ ಮತ್ತು ಜವಳಿ).
* ಎಂ.ಬಿ.ದ್ಯಾಬೇರಿ-ನೋಂದಣಿ ಡಿಜಿ, ಬೆಂಗಳೂರು.
* ಅರವಿಂದ್ ಶ್ರೀವಾಸ್ತವ್-ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ.
* ರಾಜೇಂದ್ರ ಕುಮಾರ್ ಕಠಾರಿಯಾ-ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ನಗರ
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ,
* ಹರ್ಷ ಗುಪ್ತಾ-ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ.
* ಮುನೀಶ್ ವೌದ್ಗಿಲ್-ಆಯುಕ್ತರು, ಕೃಷ್ಣಾ ಮೇಲ್ದಂಡೆ ಯೋಜನೆ, ಪರಿಹಾರ ಮತ್ತು ಪುನರ್ವಸತಿ, ಬಾಗಲಕೋಟೆ.
* ಡಾ.ಜಿ.ಸಿ.ಪ್ರಕಾಶ್-ವ್ಯವಸ್ಥಾಪಕ ನಿರ್ದೇಶಕ, ಗುಲ್ಬರ್ಗಾ ವಿದ್ಯುತ್ ಪ್ರಸರಣ ನಿಗಮ












Click it and Unblock the Notifications