ಯಡಿಯೂರಪ್ಪ Ads ಹೊಸದಿಗಂತ ಪಾಲಿನ ಕಲ್ಪವೃಕ್ಷ

Yeddyurappa
ಬೆಂಗಳೂರು, ನ.9: ಜೀವಂತ ಶವದಂತ್ತಿದ್ದ ಹೊಸ ದಿಗಂತ ಪತ್ರಿಕೆಗೆ ಜೀವ ತುಂಬಿದ್ದು ಯಡಿಯೂರಪ್ಪ ಅವರ ಸರ್ಕಾರದ ಜಾಹೀರಾತುಗಳು.

ಯಡಿಯೂರಪ್ಪ ಅವರು ರಾಜಕೀಯ ಲಾಭಕ್ಕಾಗಿ ಇಂತಹ ಪತ್ರಿಕೆಗಳ ಆಯ್ದ ಕೆಲವು ಪತ್ರಕರ್ತರನ್ನು ಬಳಸಿಕೊಂಡಿದ್ದರು. ಅವರಲ್ಲಿ ಮುಂಚೂಣಿಯ ಪತ್ರಕರ್ತ ಈ ಶಾಂತಾರಾಮ್. ಪ್ರಜಾವಾಣಿಗಿಂತಲೂ ತಮ್ಮ ಪತ್ರಿಕೆ ಮುಂಚೂಣಿಯಲ್ಲಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಅದನ್ನು ಸರ್ಕಾರಕ್ಕೆ ನೀಡಿದ್ದು ದ.ಗು. ಲಕ್ಷ್ಮಣ್

ಕನ್ನಡ ಪ್ರಭ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗಿಂತಲೂ ಹೆಚ್ಚು ಜಾಹೀರಾತು ದರದಲ್ಲಿ ಜಾಹೀರಾತು ಪಡೆದುಕೊಳ್ಳುವಲ್ಲಿಯೂ ಈ ಪತ್ರಿಕೆ ಯಶಸ್ವಿಯಾಗಿದೆ.

ಶಾಂತಾರಾಮಗೆ ಕೆಂಗೇರಿ ಬಂಡೆಮಠದಲ್ಲಿ ಹೌಸಿಂಗ್ ಬೋರ್ಡು ಸೈಟಿದೆ. ಪತ್ನಿಗೆ ಎಲ್‌ಐಸಿಯಲ್ಲಿ ಕೆಲಸವಿದೆ. ಈಗಾಗಾಲೇ ಒಂದು ಸೈಟು ಪಡೆದುಕೊಂಡಿರುವ ಈ ವ್ಯಕ್ತಿ ತನಗೆ ಸರ್ಕಾರದಿಂದ ನಿವೇಶನ ಸಿಕ್ಕಿಲ್ಲ ಎಂದು ಗೃಹ ಮಂಡಳಿಗೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಮತ್ತೊಂದು ಮನೆ ಪಡೆದುಕೊಂಡಿದ್ದಾರೆ. ಇದು ಹೌಸಿಂಗ್ ನಿಯಮದಡಿ ಶಿಕ್ಷಾರ್ಹ ಅಪರಾಧ. ಆದರೆ ಯಡಿಯೂರಪ್ಪ ಕೃಪೆಯಿಂದ ಪ್ರಕರಣ ಬೆಳಕಿಗೆ ಬಂದಿಲ್ಲ.

ಬಿಜೆಪಿ ಕಚೇರಿಯಲ್ಲೇ ಮನೆ: ನಿವೇಶನ ಪಡೆಯಲು ಹಾಕಿರುವ ಅರ್ಜಿಯಲ್ಲಿ ಮೂಲ ಮನೆಯ ವಿಳಾಸ ನೀಡದೆ, ಮಲ್ಲೇಶ್ವರದ ಬಿಜೆಪಿ ಕಚೇರಿ(ಹಳೆ ಕಚೇರಿ)ಯ ವಿಳಾಸ ನೀಡಿದ್ದಾರೆ.

ಅರ್ಜಿ ಹಾಕಿದ ಶಾಂತಾರಾಮ್‌ಗೆ ಗೃಹ ಮಂಡಳಿ ಆಯುಕ್ತರಿಂದ ಒಂದೇ ತಿಂಗಳಲ್ಲಿ 13.5*18 ಸುತ್ತಳತೆಯ ಮನೆ ಜಾರಿ ಮಾಡಲಾದ ಆದೇಶ (2010ರ ಜನವರಿ 12) ಬಂದಿದೆ.

ಅಚ್ಚರಿಯ ಸಂಗತಿಯೆಂದರೆ, ಈ ಮನೆಗಾಗಿ 70 ಸಾವಿರ ರೂಪಾಯಿ ಭರಿಸಿದ್ದ ಈ ಪತ್ರಕರ್ತ ಉಳಿದ 33,88,400 ರೂಪಾಯಿ ನಾಲ್ಕು ಕಂತುಗಳಲ್ಲಿ ಪಾವತಿಸಬೇಕಾಗಿತ್ತು.

ಸೈಟ್ ದುಡ್ಡು ಕಟ್ಟಿದ್ದು ಯಡ್ಡಿ?: ಇದಕ್ಕಾಗಿ 2001ರ ಜನವರಿ 22ರಂದು ಯಡ್ಡಿಗೆ ಪತ್ರ ಬರೆದ ಈ ವ್ಯಕ್ತಿ, 'ಕಂತು ಭರಿಸಲು ಕಷ್ಟವಾಗುತ್ತಿದೆ. ದಯವಿಟ್ಟು ಬಾಕಿ ಹಣವನ್ನು ತಾವೇ ಭರಿಸಬೆಕು'' ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ.

ಇದಕ್ಕೆ ಪೂರಕವಾಗಿ ಮನೆ ಪಡೆದ 10 ದಿನಕ್ಕೆ ಈ ಪತ್ರ ದಿಗಂತ ಸ್ಥಾನೀಯ ಸಂಪಾದಕನ ಹೆಸರಲ್ಲಿ ಸಿಎಂಗೆ ತಲುಪಿತ್ತು.

ಅವರ ಮನೆ ಬಾಕಿ ಕಂತನ್ನು ಯಡ್ಡಿಯೇ ತನ್ನ ಶಿಷ್ಯ ಸಿದ್ಧಲಿಂಗಯ್ಯರ ನೆರವಿನಿಂದ ಭರಿಸಿದ್ದರೂ ಈಗ ಬೇರೆಯೇ ಕತೆಕಟ್ಟಲಾಗುತ್ತಿದೆ.

ಆದರೆ ತನಿಖೆ ನಡೆದರೆ ಈ ಅಕ್ರಮ ಬಯಲಾಗಲಿದೆ. ಸದರಿ ಪತ್ರಕರ್ತನಿಗೆ ಸೀಎಂ ವಿವೇಚನಾ ಕೋಟದಿಂದ ಮನೆ ನೀಡಿದ್ದರು. ಒಬ್ಬನಿಗೆ ಎರಡೆರಡು ನಿವೇಶನ ಜಾರಿ ಮಾಡುವುದು ಅಕ್ರಮವಾಗುತ್ತದೆ.

ಸರ್ಕಾರಿ ಜಾಹೀರಾತು ಪಡೆಯುವ ಕಲೆ ಹೊಸದಿಗಂತ ಲಕ್ಷ್ಮಣನಿಗೆ ಮಾತ್ರ ಗೊತ್ತು.. ಹೇಗೆ? ಮುಂದೆ ಓದಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+