ಸರ್ಕಾರಿ 'ಆಡ್' ಹಿಡಿಯುವ ಕಲೆ ಲಕ್ಷ್ಮಣನಿಗೆ ಮಾತ್ರ ಗೊತ್ತು!

Why did Government favours Hosadiganth
ಬೆಂಗಳೂರು, ನ.9: ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ನಿಯಮ ಮೀರಿ ಹೊಸದಿಗಂತ ಪತ್ರಿಕೆಗೆ ಸರ್ಕಾರಿ ಜಾಹೀರಾತು ನೀಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕರಾವಳಿ ಅಲೆ ಸಂಪಾದಕ ಬಿವಿ ಸೀತಾರಾಂ ಅವರು ಸಂಪೂರ್ಣ ಮಾಹಿತಿಯನ್ನು ತೆಹೆಲ್ಕಾ ತಂಡಕ್ಕೆ ರವಾನಿಸಿದ್ದಾರೆ.

ಸರ್ಕಾರಿ ಜಾಹೀರಾತಿನ ಮೂಲಕ ಹೊಸದಿಗಂತ ಪಡೆದ ಲಾಭದ ಬಗ್ಗೆ ತೆಹೆಲ್ಕಾ ಸಂಪೂರ್ಣ ವಿವರಗಳನ್ನು ನೀಡಿ ಪ್ರಕಟಿಸಿದೆ. ಇದಕ್ಕೂ ಮುನ್ನ ಜಾಹೀರಾತು ಪಡೆಯಲು ಹೊಸದಿಗಂತವನ್ನು ರಾಜ್ಯಮಟ್ಟದ ಪತ್ರಿಕೆ ಎಂದು ಬಿಂಬಿಸಿದ ಸಂಪಾದಕ ದ.ಗು. ಲಕ್ಷ್ಮಣ್ ಅವರ ಪತ್ರದ ಪ್ರತಿಯನ್ನು ವೆಬ್ ನಲ್ಲಿ ಕಾಣಬಹುದು.

ಅಹಾ.. ಲಕ್ಷ್ಮಣ ಸರ್ಕುಲೇಷನ್ ಏಷ್ಟಪ್ಪಾ ಇದೆ?: ನಮ್ಮ ಪತ್ರಿಕೆ ಸರ್ಕುಲೇಷನ್ ಒಂದು ಲಕ್ಷ ದಾಟಿದೆ. ರಾಜ್ಯಮಟ್ಟದ ಪತ್ರಿಕೆ ಎಂದು ಪರಿಗಣಿಸಬೇಕು ಎಂದು ಆಗಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಲಕ್ಷ್ಮಣ್ ಪತ್ರ ಬರೆಯುತ್ತಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಯಡಿಯೂರಪ್ಪ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಸೂಕ್ತ ನಿರ್ದೇಶನ ನೀಡುತ್ತಾರೆ.

ಈ ಮೂಲಕ ರಾಮಯ್ಯ ಸಮಿತಿ ನೀಡಿದ ಶಿಫಾರಸ್ಸನ್ನು ಗಾಳಿಗೆ ತೂರಲಾಗುತ್ತದೆ. ವರದಿ ಪ್ರಕಾರ ಪತ್ರಿಕೆ ಸರ್ಕುಲೇಷನ್ 75,000 ನಷ್ಟಿದ್ದರೆ ರಾಜ್ಯಮಟ್ಟದ ಪತ್ರಿಕೆ ಎಂದು ಪರಿಗಣಿಸಬಹುದು. Audit Bureau of Circulation ಇದಕ್ಕೆ ಮಾನ್ಯತೆ ನೀಡಬೇಕು.

ಇದೇ ಪ್ರಕಾರ ಹೊಸದಿಗಂತ ಪತ್ರಿಕೆಗೆ ಮಾನ್ಯತೆ ನೀಡಲು ವಾರ್ತಾ ಇಲಾಖೆ ನಿರಾಕರಿಸುತ್ತದೆ. ಆದರೆ, ಯಡಿಯೂರಪ್ಪ ಅವರು ಪ್ರಭಾವ ಬೀರಿ ರಾಜ್ಯಮಟ್ಟದ ಮಾನ್ಯತೆ ದೊರಕಿಸಿಕೊಡುತ್ತಾರೆ. ಅಲ್ಲದೆ ಕನ್ನಡಪ್ರಭ, ಸಂಯುಕ್ತ ಕರ್ನಾಟಕಕ್ಕಿಂತ ಅಧಿಕ ಮೊತ್ತದ ಜಾಹೀರಾತು ಸಿಗುತ್ತದೆ.

ಕನಿಷ್ಠವೆಂದರೂ 10 ಕೋಟಿ ರೂ. ಗೂ ಅಧಿಕ ಮೊತ್ತದ ಜಾಹೀರಾತ ಹೊಸದಿಗಂತದ ಜೋಳಿಗೆ ಸೇರುವಂತೆ ಅಂದಿನ ವಾರ್ತಾ ಇಲಾಖೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಕೃಷ್ಣ ಪಾಲೇಮಾರ್ ನೋಡಿಕೊಂಡಿದ್ದಾರೆ.

ಅಧಃಪತನ ಕಾಯುತ್ತಿದ್ದ ಪತ್ರಿಕೆಯನ್ನು ಕೈಹಿಡಿದು ಎತ್ತಿದ್ದ ಯಡಿಯೂರಪ್ಪ ಅವರನ್ನು ಹೊಗಳಬೇಕೆ ಅಥವಾ ಸರ್ಕಾರಿ ಹಣ ಪೋಲು ಮಾಡಿ ಸ್ವಜನ ಪಕ್ಷಪಾತ ಮಾಡಿ ಕೂಡಾ ಹಗರಣ ಮುಚ್ಚಿ ಹಾಕಿದ್ದಕ್ಕೆ ಛೀಮಾರಿ ಹಾಕಬೇಕೆ ಜನತೆಯೇ ನಿರ್ಧರಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+