ಹೊಸ ದಿಗಂತಕ್ಕೆ ಯಡಿಯೂರಪ್ಪ ಕೊಟ್ಟ ರೊಕ್ಕ ಎಷ್ಟು?

How Hosadugantha benefited from Yeddyurappa
ಬೆಂಗಳೂರು, ನ.9: ಪತ್ರಕರ್ತರ ಆಸ್ತಿ ತನಿಖೆಯಾಗಬೇಕು ಎಂದು ಹೇಳಿಕೊಂಡು ತಿರುಗುತ್ತಿದ್ದ ಹಾಲಿ ಅಬಕಾರಿ ಸಚಿವ ರೇಣುಕಾಚಾರ್ಯರು ತಮ್ಮ ನಾಲಿಗೆ ಕಚ್ಚಿಕೊಳ್ಳುವ ಪ್ರಸಂಗ ಎದುರಾಗಲಿದೆ.

ಯಡಿಯೂರಪ್ಪ ಅವರ ಬೆನ್ನು ಸವರಿ ಪುಕ್ಕಟೆ ನಿವೇಶನ ಗಿಟ್ಟಿಸಿ ಕೊಂಡಿರುವ ಪತ್ರಕರ್ತರು ಸಂಖ್ಯೆ ಬೆಳೆಯುತ್ತಲೇ ಇದೆ. ಅಕ್ರಮ ಗಣಿಗಾರಿಕೆಯಿಂದ ಲಾಭ ಪಡೆದ ಪತ್ರಕರ್ತ ವಿವರಗಳನ್ನು ಪ್ರಜಾವಾಣಿ ದೈನಿಕ ಬಹಿರಂಗಪಡಿಸಿತ್ತು.

ಈಗ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಅಕ್ರಮವಾಗಿ ಸರ್ಕಾರಿ ಜಾಹೀರಾತುಗಳನ್ನು ಪಡೆದು ಲಾಭ ಮಾಡಿಕೊಂಡ 'ರಾಜ್ಯಮಟ್ಟ'ದ ಪತ್ರಿಕೆಯ ಮೇಲೆ ಕಣ್ಣುಬಿದ್ದಿದೆ.

ಅಫ್ ಕೋರ್ಸ್ ಹಿಂದೂ ಅಜೆಂಡಾವುಳ್ಳ ಹೊಸದಿಗಂತ ಪತ್ರಿಕೆಗೆ ಯಡಿಯೂರಪ್ಪ ಹೆಲ್ಪ್ ಮಾಡುವುದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಹೊಸದಿಗಂತದ ಸಂಪಾದಕರುಗಳ ಜೋಳಿಗೆಗೆ ಯಡಿಯೂರಪ್ಪ ಅವರು ಎತ್ತಿಕೊಟ್ಟಿದ್ದು ಸಾರ್ವಜನಿಕರ ಹಣ ಎಂಬುದು ಮರೆಯುವಂತಿಲ್ಲ.

ಯಡಿಯೂರಪ್ಪ ಅವರ ಸ್ವಜನ ಪಕ್ಷಪಾತ ಫಲವಾಗಿ ಲಾಭ ಪಡೆದವರಲ್ಲಿ ಹೊಸ ದಿಗಂತ ಸ್ಥಾನೀಯ ಸಂಪಾದಕ ಶಾಂತಾರಾಂ ಹಾಗೂ ಸಂಪಾದಕ ದ.ಗು. ಲಕ್ಷ್ಮಣ್ ಅವರ ಹೆಸರು ಪ್ರಸ್ತಾಪಿಸಿ ಕೆನರಾ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಈ ಪತ್ರಕರ್ತರು ರಾಜಕಾರಣಿಗಳನ್ನು ವೈಭವೀಕರಿಸಿ ಬರೆದಿರುವುದಕ್ಕೆ ಲಕ್ಷಾಂತರ ರೂ ಹಣ ಮತ್ತು ಪುಕ್ಕಟೆ ನಿವೇಶನ ಪಡೆದುಕೊಂಡಿದ್ದಾರೆ. ಆದರೆ ಆರೆಸ್ಸೆಸ್ ತತ್ತ್ವ ಪಾಲಿಸುವ ಶಾಂತಾರಾಂ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರಿಂದ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಹೌಸಿಂಗ್ ಬೋರ್ಡ್ ಮನೆ ಪಡೆದಿದ್ದಾರೆ ಎನ್ನುತ್ತಿದೆ ಇನ್ನೊಂದು ಕನ್ನಡ ಸಾಪ್ತಾಹಿಕದ ವರದಿ.

ಹೊಸೂರು ರಸ್ತೆಯ ಚಂದಾಪುರ ಬಳಿಯ ಸೂರ್ಯ ನಗರದಲ್ಲಿ ಮಂಜೂರಾದ ಸುಮಾರು 34,58,400 ರೂಪಾಯಿ ಬೆಲೆ ಬಾಳುವ ಶಾಂತರಾಮ್ ಮನೆಗೆ ಮಾಜಿ ಸೀಎಂ ಯಡಿಯೂರಪ್ಪ ಹಣ ಸಂದಾಯ ಮಾಡಿದ್ದಾರೆ ಎನ್ನಲಾಗಿದೆ.

ಯಡ್ಡಿಗೆ ಜೈ ಎಂದರೆ ಲಕ್ಷಾಂತರ ರೂ ಸುರಿಯಲಿದೆ ಹೇಗೆ? ಮುಂದೆ ಓದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+