ಶೀಘ್ರವೇ ಸದಾನಂದ ಗೌಡ ಸರ್ಕಾರ ಪತನ : ಎಚ್ಡಿಕೆ

ಸದಾನಂದ ಗೌಡರು ಅಧಿಕಾರ ವಹಿಸಿಕೊಂಡು ಮೂರು ತಿಂಗಳು ಕಳೆದರೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ನಿಯಮದ ಪ್ರಕಾರ ಸದಾನಂದ ಗೌಡರು ಅಧಿಕಾರ ವಹಿಸಿಕೊಂಡ ಆರು ತಿಂಗಳೊಳಗೆ ಮೇಲ್ಮನೆ ಅಥವಾ ವಿಧಾನಸಭೆ ಸದಸ್ಯರಾಗಬೇಕಾಗುತ್ತದೆ.
ಆದರೆ, ಈ ಬಗ್ಗೆ ಸದಾನಂದ ಗೌಡರಾಗಲಿ, ಬಿಜೆಪಿಯಾಗಲಿ ತಲೆಕೆಡಿಸಿಕೊಂಡಿಲ್ಲ. ಯಡಿಯೂರಪ್ಪ ಅವರು ಜೈಲಿನಿಂದ ಹೊರಬಂದ ಮೇಲೆ ಸದಾನಂದ ಗೌಡರಿಗೆ ಕಷ್ಟಕಾಲ ಆರಂಭವಾಗಲಿದೆ.
ಬಳ್ಳಾರಿಯಲ್ಲಿ ಅಭ್ಯರ್ಥಿಯನ್ನು ಸೂಚಿಸಲು ಹೆಣಗಾಡುತ್ತಿರುವ ಬಿಜೆಪಿ, ಯಡಿಯೂರಪ್ಪ ಹಾಗೂ ರೆಡ್ಡಿ ಬಳಗದ ವಿರೋಧ ಕಟ್ಟಿಕೊಂಡು ಅಧಿಕಾರದಲ್ಲಿ ಉಳಿಯುವುದು ಅನುಮಾನವಾಗಿದೆ. ಯಾವುದೇ ಕ್ಷಣದಲ್ಲಾದರೂ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಎಂದು ನಂಜನಗೂಡಿಗೆ ಕಾರ್ತಿಕ ಸೋಮವಾರ ಪೂಜೆಗೆ ಧರ್ಮಪತ್ನಿ ಅನಿತಾ ಅವರೊಡನೆ ಬಂದಿದ್ದ ಕುಮಾರಸ್ವಾಮಿ ಅವರು ಹೇಳಿದ್ದಾರೆ.











Click it and Unblock the Notifications