'ಸತ್ಯ'ವಲ್ಲದ ದಾಖಲೆ ಯಡ್ಡಿಗೆ ಬೇಡ ಜೈಲು ಕೋಟಲೆ

Documents by Basha against BSY not 'true'
ಬೆಂಗಳೂರು, ನ. 8 : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜಾಮೀನು ಕೊಟ್ಟಿರುವ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿವಿ ಪಿಂಟೋ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ವಕೀಲ ಸಿರಾಜಿನ್ ಬಾಷಾ ಅವರು ದಾಖಲಿಸಿರುವ 3ನೇ ಖಾಸಗಿ ದೂರಿನಲ್ಲಿ ಸಲ್ಲಿಸಿರುವ 7 ಪುಟಗಳ ಪ್ರಮಾಣಿತ ಹೇಳಿಕೆಯಲ್ಲಿ, ಅವರು ಸಲ್ಲಿಸಿರುವ ದಾಖಲೆಗಳೆಲ್ಲ 'ಸತ್ಯ'ವಾದುದು ಎಂದು ಎಲ್ಲೂ ಹೇಳಿಲ್ಲದಿದ್ದರೂ ಜಾಮೀನು ನಿರಾಕರಿಸಿದ್ದು ಹೇಗೆ ಎಂದು ನ್ಯಾ. ಪಿಂಟೋ ಪ್ರಶ್ನಿಸಿದ್ದಾರೆ.

ಸತ್ಯ ಎಂದು ಪ್ರಮಾಣಿಸಿರದಿದ್ದಾಗ ಅವನ್ನು ಕೆಳ ನ್ಯಾಯಾಲಯ ಪರಿಗಣಿಸಿದ್ದಾದರೂ ಹೇಗೆ ಎಂದು ಮರುಪ್ರಶ್ನೆ ಹಾಕಿದೆ. ಅಲ್ಲದೆ, ಆ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆಯೆ ಎಂಬುದನ್ನು ಕೂಡ ಕೆಳ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ.

"ಆದ್ದರಿಂದ, ಯಡಿಯೂರಪ್ಪನವರಿಗೆ ಜಾಮೀನು ಕೊಡದೆ ಇರಲು ಸಾಧ್ಯವೇ ಇಲ್ಲ" ಎಂದು ನ್ಯಾಯಮೂರ್ತಿ ಪಿಂಟೋ ಸ್ಪಷ್ಟವಾಗಿ ಹೇಳಿದ್ದಾರೆ. ಇದೇ ರೀತಿಯ ಮೂರು ದೂರುಗಳು ಲೋಕಾಯುಕ್ತ ನ್ಯಾಯಾಲಯದ ಮುಂದೆ ಇರುವ ಬಗ್ಗೆ ಅವರು, ಈ ಕ್ಷಣದಲ್ಲಿ ಅವುಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+