ಯಡ್ಡಿ, ಎಲೆಕ್ಷನ್ ಬಗ್ಗೆ ಶ್ರೀರಾಮುಲು ನೋ ಕಮೆಂಟ್ಸ್

ಮಂಗಳವಾರ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿದ ಶ್ರೀರಾಮುಲು ಅವರು, ಪ್ರಸಕ್ತ ರಾಜಕೀಯ ಬೆಳವಣಿಗೆ, ಬಳ್ಳಾರಿ ಉಪ ಚುನಾವಣೆ, ಯಡಿಯೂರಪ್ಪ ಅವರ ಮುಂದಿನ ನಡೆ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾತುಕತೆ ನಂತರ ಸುದ್ದಿಗಾರರ ಮುಂದೆ ಕಾಣಿಸಿಕೊಂಡ ಮಾಜಿ ಆರೋಗ್ಯ ಸಚಿ ಶ್ರೀರಾಮುಲು, 'ನಮ್ಮ ನಾಯಕರು ಜನಾರ್ದನ ರೆಡ್ಡಿ ಏನು ಸೂಚನೆ ಕೊಟ್ಟಿದ್ದಾರೆ, ನಾನು ಏನು ಮಾಡ್ಬೇಕು ಅನ್ನೋದು ಬಳ್ಳಾರಿಯಲ್ಲಿ ತೀರ್ಮಾನವಾಗಲಿದೆ.
ಮಂಗಳವಾರ ಸಂಜೆ ಬೆಂಬಲಿಗರೊಡನೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವಂತೆ ಜನಾರ್ದನ ರೆಡ್ಡಿ ಹೇಳಿದ್ದಾರೆ. ಅದರಂತೆ ಇವತ್ತು ಸಂಜೆ ನಿರ್ಣಯ ತೆಗೆದುಕೊಂಡು ನಾಳೆ ನಾಮಪತ್ರ ಸಲ್ಲಿಸುತ್ತೇನೆ' ಎಂದು ಶ್ರೀರಾಮುಲು ಹೇಳಿದರು.
ಯಡಿಯೂರಪ್ಪಗೆ ಜಾಮೀನು ಸಿಕ್ಕಿರುವುದರ ಬಗ್ಗೆ ಯಾವುದೇ ಉತ್ತರ ನೀಡಲು ನಿರಾಕರಿಸಿದ್ದು ಎಲ್ಲರಿಗೂ ಆಶ್ಚರ್ಯವಾಗಿತ್ತು. ಶ್ರೀರಾಮುಲು ಬಿಜೆಪಿ ಚಿನ್ಹೆಯಲ್ಲೇ ಸ್ಪರ್ಧಿಸುತ್ತಾರಾ? ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲಿದ್ದಾರಾ? ಯಡಿಯೂರಪ್ಪ ಅವರ ಬೆಂಬಲ ಪಡೆಯುತ್ತಾರಾ? ಕಾದು ನೋಡಬೇಕಿದೆ.












Click it and Unblock the Notifications