ಭ್ರಷ್ಟಾಚಾರ ವಿರುದ್ಧದ ಅಡ್ವಾಣಿ ಜನಚೇತನಾ ಯಾತ್ರೆ ವಿಫಲ?

lk-advani-jan-chetna-yatra-a-big-failure
ಬೆಂಗಳೂರು‌, ನ. 6: ಬಿಜೆಪಿಯ ಹಿರಿಯ ನಾಯಕ ಲಾಲ ಕೃಷ್ಣ ಅಡ್ವಾಣಿ ಕೈಗೊಂಡಿರುವ ಮಹತ್ವಾಕಾಂಕ್ಷಿ ಜನಚೇತನಾ ಯಾತ್ರೆ ನಿರೀಕ್ಷಿತ ರೀತಿಯಲ್ಲಿ ಯಶಸ್ವಿಯಾಗಿ ಮುನ್ನಗ್ಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರ ನಿರಾಶಾದಾಯಕವಾಗಿದೆ.

ಇಡೀ ದೇಶದಲ್ಲಿ ಕಾಳಧನ ಮತ್ತು ಭ್ರಷ್ಟಾಚಾರ ವಿರೋಧಿ ಸುನಾಮಿ ಅಲೆ ಎದ್ದಿದ್ದರೂ ಅದೇ ಮಂತ್ರ ಜಪಿಸುತ್ತಾ ಯಾತ್ರೆ ಕೈಗೊಂಡಿರುವ ಅಡ್ವಾಣಿ ಅವರ ಜನಚೇತನಾ ಯಾತ್ರೆಯಲ್ಲಿ ಜನರೂ ಇಲ್ಲ; ಚೇತನವೂ ಇಲ್ಲ ಎಂಬಂತಾಗಿದೆ. ಕನಿಷ್ಠ ಪಕ್ಷ ಅಣ್ಣಾ ಹಜಾರೆ ಅವರ ಸಭೆಗಳಿಗೆ ಬರುತ್ತಿದ್ದಷ್ಟು ಜನರೂ ಅಡ್ವಾಣಿ ಸಭೆಗಳಲ್ಲಿ ಕಾಣಿಸುತ್ತಿಲ್ಲ.

ಹಾಗೆಂದು ಜನ ಆಗಲೇ ಭ್ರಷ್ಟಾಚಾರದಿಂದ ವಿಮುಖರಾದರು ಅಂತಲ್ಲ. ಆದರೆ ಈ ಯಾತ್ರೆಯಲ್ಲಿ ರಾಜಕೀಯ ಢಾಳಾಗಿರುವುದರಿಂದ ಜನ ಅದರತ್ತ ಸುಳಿಯುತ್ತಿಲ್ಲ ಎಂಬುದು ಪಕ್ಷದೊಳಗಿನ ಜನರೇ ಹೇಳುವ ಮಾತು. ಅದಕ್ಕಿಂತ ಹೆಚ್ಚಾಗಿ ಪಕ್ಷದೊಳಗೇ ಅತಿರಥ ಮಹಾರಥ ಭ್ರಷ್ಟಾಚಾರಿಗಳು ಇರುವಾಗ ಯಾವ ಮುಖ ಹೊತ್ತು ಯಾತ್ರೆ ನಡೆಸುತ್ತಿದ್ದಾರೆ ಎಂಬ ಪ್ರಶ್ನೆಯೂ ನುಸುಳಿದೆ.

ಇದೀಗ ಯಾತ್ರೆಯ ಅಂತಿಮ ಚರಣದಲ್ಲಿರುವ ಅಡ್ವಾಣಿ ಅವರು ಇಂದು ಗುಜರಾತಿಗೆ ಪ್ರವೇಶಿಸಲಿದ್ದಾರೆ. ಆರಂಭದಲ್ಲಿ ಅಡ್ವಾಣಿ ಯಾತ್ರೆಗೆ ಹಸಿರು ನಿಶಾನೆ ತೋರಲು ನಿರಾಕರಿಸಿದ್ದ ಮುಖ್ಯಮಂತ್ರಿ ನರೇಂದ್ರ ಮೋದಿ ಇದೀಗ ತುಂಬು ತೋಳಿನ ಸ್ವಾಗತ ಕೋರಲು ಸಜ್ಜಾಗಿದ್ದಾರೆ. ಕನಿಷ್ಠ ಇಲ್ಲಾದರೂ ಅಡ್ವಾಣಿ ಅವರಿಗೆ ಯಾತ್ರೆ ಆಶಾದಾಯಕವಾಗಿರುತ್ತದಾ, ನೋಡಬೇಕು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+