ನಾಳೆಯಿಂದ ನಾಲ್ಕು ದಿನ ಸ್ಟೇಟ್ ಬ್ಯಾಂಕ್ ರಜಾ...
ಬೆಂಗಳೂರು
/ ನವದೆಹಲಿ ನ 5: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ನವೆಂಬರ್ 8 ಮತ್ತು 9ರಂದು ದೇಶಾದ್ಯಂತ ಮುಷ್ಕರ ಹೂಡಲಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಮಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿ ಎಸ್ ಬಿ ಐ ಒಕ್ಕೂಟದ ಬ್ಯಾಂಕ್ ಗಳ ವಹಿವಾಟುಗಳಲ್ಲಿ ತೀವ್ರ ವ್ಯತಯವಾಗಲಿದೆ. id="toptextpromo">ನವೆಂಬರ್
6 (ಭಾನುವಾರ), 7 (ಬಕ್ರೀದ್ ರಜಾ) ಮತ್ತು 8, 9 (ಮುಷ್ಕರ) ಹೀಗಾಗಿ ದೇಶದ ಸಾರ್ವಜನಿಕ ವಲಯದ ನಂಬರ್ 1 ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರೂಪ್ ಗಳ ವ್ಯವಹಾರಗಳಲ್ಲಿ ತೊಂದರೆ ಉಂಟಾಗಲಿದೆ ಎಂದು ಬ್ಯಾಂಕಿನ ಮುಖ್ಯಸ್ಥರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನವೆಂಬರ್ 10 ರಂದು ಉತ್ತರಭಾರತದ ಕೆಲ ರಾಜ್ಯಗಳಲ್ಲಿ ಗುರುನಾನಕ್ ಜಯಂತಿ ಪ್ರಯುಕ್ತ ರಜೆ ಇರುವುದರಿಂದ ಬ್ಯಾಂಕ್ ವ್ಯವಹಾರ ಸುಮಾರು ಐದು ದಿನಗಳು ಇರುವುದಿಲ್ಲ. id='are-slot-1' class='oiad oi-axt oiadv'> id='top-searched-articles'>ಆಡಳಿತ
ವರ್ಗದ ಏಕಪಕ್ಷೀಯ ಧೋರಣೆ, ನಿವೃತ್ತ ಅಧಿಕಾರಿಗಳ ಪಿಂಚಣಿ ಪರಿಷ್ಕರಣೆ, ಅಧಿಕಾರಿಗಳ ವರ್ಗಾವಣೆ ನೀತಿ, ಬಡ್ತಿಯ ನಂತರ ಸೂಕ್ತ ವೇತನ ನಿಗದಿ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಅಧಿಕಾರಿಗಳು ಮುಷ್ಕರ ಹೂಡಲಿದ್ದಾರೆ. ಮುಷ್ಕರದಿಂದ ಸಾರ್ವಜನಿಕರಿಗಾಗುವ ತೊಂದರೆಗೆ ಅಧಿಕಾರಿಗಳ ಒಕ್ಕೂಟ ಕ್ಷಮೆಯಾಚಿಸಿದೆ.











Click it and Unblock the Notifications