ಅಶೋಕ್ ಭೂಹಗರಣ : ಕೋರ್ಟಿನಿಂದ ಪೊಲೀಸ್ ತರಾಟೆ

R Ashok
ಬೆಂಗಳೂರು, ನ. 5 : ಭೂ ಹಗರಣದ ಸುಳಿಯಲ್ಲಿ ಸಿಲುಕಿಕೊಂಡಿರುವ ಸಾರಿಗೆ ಮತ್ತು ಗೃಹ ಖಾತೆ ಸಚಿವ ಆರ್ ಅಶೋಕ್ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಹೂಡಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ವರದಿಯನ್ನು ನ.21ರೊಳಗೆ ಸಲ್ಲಿಸಬೇಕೆಂದು ಕೋರ್ಟ್ ತಾಕೀತು ಮಾಡಿದೆ.

ಪೊಲೀಸ್ ವರದಿಯನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿತ್ತು. ಆದರೆ, ವರದಿ ಇನ್ನೂ ಸಿದ್ಧವಾಗಿರದ ಕಾರಣ ಪೊಲೀಸರು ಸಮಯಾವಕಾಶ ಕೇಳಿದರು. ಆಗ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶ ಸುಧೀಂದ್ರ ರಾವ್ ಅವರಿಗೆ 21ರಂದು ಅಂತಿಮ ವರದಿ ಸಲ್ಲಿಸಬೇಕೆಂದು ಕಡೆಯ ಅವಕಾಶ ನೀಡಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಲೊಟ್ಟೆಗೊಲ್ಲನಹಳ್ಳಿಯಲ್ಲಿ 10 ಗುಂಟೆ ಜಮೀನನ್ನು ಅನಧಿಕೃತವಾಗಿ ಡಿನೋಟಿಫೈ ಮಾಡಿ ಅತ್ಯಂತ ಕಡಿಮೆ ಬೆಲೆಗೆ ಜಮೀನನ್ನು ಕಬಳಿಸಿದ್ದಾರೆ ಎಂಬ ಆರೋಪವನ್ನು ಅಶೋಕ್ ಮೇಲೆ ಹೊರಿಸಲಾಗಿದೆ. 15.36 ಕೋಟಿ ರು. ಬೆಲೆಬಾಳುವ ಜಮೀನನ್ನು ಅವರು ಕೇವಲ 44.77 ಲಕ್ಷ ರು.ಗೆ ಕೊಂಡಿದ್ದರು.

ಅಶೋಕ್ ಅವರು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸುತ್ತಿದ್ದರೆ, ಬಿಜೆಪಿ ಪಕ್ಷದಲ್ಲಿಯೇ ಅವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರೇಣುಕಾಚಾರ್ಯ ಅವರು, ಅಶೋಕ್ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಹೇಳಿ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+