ಸತ್ಯಂ ರಾಜುಗೂ ಗಾಲಿರೆಡ್ಡಿಗೂ ಎಲ್ಲಿಯ ಹೋಲಿಕೆ

Gali Janardhan Reddy
ಹೈದರಾಬಾದ್, ನ.4: ಬಹುಕೋಟಿ ಸತ್ಯಂ ಹಗರಣ ರುವಾರಿ ಸತ್ಯಂ ರಾಮಲಿಂಗರಾಜು ಜೈಲಿನಲ್ಲೂ ರಾಜನಂತೆ ಮೆರೆಯುವುದನ್ನು ಕಂಡು ಮರುಗಿದ ಗಾಲಿ ಜನಾರ್ದನ ರೆಡ್ಡಿಗಾರು ಸಿಬಿಐ ನ್ಯಾಯಾಲಯದಲ್ಲಿ ಮಂಡಿಸಿದ ವಾದ ಎಲ್ಲರ ಕಣ್ಣರಳಿಸಿತು.

ಚಂಚಲಗುಡ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ಬಿ ರಾಮಲಿಂಗರಾಜು ಅವರಿಗೆ 'ಎ' ದರ್ಜೆ ಖೈದಿ ಸ್ಥಾನಮಾನ ನೀಡಿದ್ದಾರೆ. ರಾಜು ನಂತೆ ನಾನು ಕೂಡಾ ಉದ್ಯಮಿ. ನನಗೂ ಸಮಾಜದಲ್ಲಿ ಒಳ್ಳೆ ಹೆಸರಿದೆ.

ನನಗೆ ಪ್ರತ್ಯೇಕ ಕೊಠಡಿ, ಒಳ್ಳೆ ಊಟ ಮತ್ತಿತ್ತರ ಸೌಲಭ್ಯಗಳು ನೀಡಬೇಕು. ನನಗ್ಯಾಕೆ ರಾಜುಗೆ ನೀಡಿದ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಗಾಲಿ ರೆಡ್ಡಿ ಪ್ರಶ್ನಿಸಿದ್ದಾರೆ.

ನನ್ನ ಸ್ಟೇಟಸ್ ನೋಡಿ ಒಮ್ಮೆ: ಆದರೆ, ರೆಡ್ಡಿಯ ವಾದಕ್ಕೆ ತಿರುಗೇಟು ನೀಡಿದ ಸಿಬಿಐ, ಉದ್ಯಮಕ್ಕೆ ಇಳಿಯುವ ಮುನ್ನ ಗಾಲಿ ರೆಡ್ಡಿ ಸಾಮಾನ್ಯ ಆರ್ಥಿಕ ಹಿನ್ನೆಲೆ ಹೊಂದಿದ್ದರು. ಗಣಿ ಉದ್ಯಮಕ್ಕೆ ಇಳಿದ ಮೇಲೆ ಅಕ್ರಮವಾಗಿ ಆಸ್ತಿ ಸಂಪಾದಿಸಿ ಸಮಾಜದಲ್ಲಿ ಘನತೆ, ಗೌರವವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇಬ್ಬರ ಸಾಮಾಜಿಕ ಹಿನ್ನೆಲೆ ಪರಿಗಣಿಸಿ, ರೆಡ್ಡಿಗೆ ಉತ್ತಮ ವ್ಯವಸ್ಥೆ ನೀಡಬಾರದು ಎಂದು ನ್ಯಾಯಾಲಯವನ್ನು ಕೋರಿದ್ದಾರೆ.

ಸೆ.5ರಿಂದ ಜೈಲಿನಲ್ಲಿರುವ ಗಾಲಿ ಜನಾರ್ದನ ರೆಡ್ಡಿ ಹಾಗೂ ಬಿವಿ ಶ್ರೀನಿವಾಸ ರೆಡ್ಡಿ ಗಳ ಜೈಲುವಾಸ ಸುಧಾರಣೆ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ನಾಗಮೂರ್ತಿ ಶರ್ಮ ಅವರು ಶುಕ್ರವಾರ(ನ.4) ವಿಚಾರಣೆ ಕೈಗೊತ್ತಿಕೊಳ್ಳಲಿದ್ದಾರೆ.

ಈ ನಡುವೆ ಜಗನ್ ಗೆ ಖೆಡ್ಡಾ ತೋಡಿದ ಜನಾರ್ದನ ರೆಡ್ಡಿ ಅವರ ಎಎಂಸಿ ಕಂಪನಿ ಮೇಲೆ ಸಿಬಿಐ ತಂಡ ದಾಳಿ ನಡೆಸಿದೆ. ಗಾಲಿ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ನ್ಯಾಯಾಂಗ ಬಂಧನ ನ.14ರಂದು ಕೊನೆಗೊಳ್ಳಲಿದೆ.

ಸಿಬಿಐ ಕಚೇರಿಯಲ್ಲಿರುವ ಜಗನ್ ತಲೆಯಲ್ಲಿ ಏನು ಪ್ಲ್ಯಾನಿದೆ...?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+