ಬೆಸ್ಕಾಂ ಭೂತಕ್ಕೆ ಸರಿಯಾಗಿ ಜಾಡಿಸಿದ ಎಚ್ ಡಿ ರೇವಣ್ಣ

ರೇವಣ್ಣ ಅವರು ಇಂಧನ ಸಚಿವರಾಗಿದ್ದ ಕಾಲದಲ್ಲಿ ಬೆಸ್ಕಾಂಗಾಗಿ ಕಯೋಟ್ ವಿದ್ಯುತ್ ವಾಹಕಗಳ ಖರೀದಿಯಲ್ಲಿ 6 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಡಿವಿ ಸದಾನಂದ ಗೌಡರ ಸರ್ಕಾರ ಲೋಕಾಯುಕ್ತ ತನಿಖೆಗೆ ವಹಿಸಿದೆ.
ಇದಕ್ಕೆ ಉತ್ತರವಾಗಿ ಪ್ರತಿಕ್ರಿಯಿಸಿದ ರೇವಣ್ನ ಅವರು ಅವ್ಯವಹಾರ ನಡೆದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಹೊಣೆಗಾರರಾಗುತ್ತಾರೆ. ನಾನು ಹೇಗೆ ಆರೋಪಿಯಾಗುತ್ತೇನೆ ಎಂದು ಪ್ರಶ್ನಿಸಿದ್ದಾರೆ.
ಸಿಬಿಐ ತನಿಖೆಗೂ ಸಿದ್ಧ: ನನ್ನ ಮೇಲೆ ಲೋಕಾಯುಕ್ತ ತನಿಖೆಗೆ ಸರ್ಕಾರ ಆದೇಶ ಹೊರಡಿಸಿರುವುದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಸಿಬಿಐ ತನಿಖೆಗೆ ವಹಿಸಿದರೂ ನನಗೆ ಭಯವಿಲ್ಲ. ಆಧಾರರಹಿತ ಆರೋಪಗಳ ಬಗ್ಗೆ ಪ್ರಚಾರ ಕೊಡುವುದನ್ನು ಮಾಧ್ಯಮಗಳು ಬಿಟ್ಟರೆ ಒಳ್ಳೆಯದು ಎಂದು ರೇವಣ್ಣ ಹೇಳಿದ್ದಾರೆ.
ನಮ್ಮ ಕುಟುಂಬದವರ ಮೇಲೆ ಬೇಕೆಂತಲೇ ಆರೋಪಗಳು ಮಾಡುತ್ತಿದ್ದಾರೆ. ಯಾರು ಯಾರು ಏನು ಅವ್ಯವಹಾರ ನಡೆಸಿದ್ದಾರೆ ಎಂಬುದನ್ನು ದಾಖಲೆಯ ಸಮೇತ ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದು ರೇವಣ್ಣ ಹೇಳಿದರು.












Click it and Unblock the Notifications