ನ.8 ಕ್ಕೆ ಜಯಲಲಿತಾ ಬೆಂಗಳೂರಿಗೆ ಬರ್ಲೇ ಬೇಕು

ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಎರಡು ಬಾರಿ ಹಾಜರಾತಿ ಹಾಕಿದ್ದ ಜಯಲಲಿತಾ ಅವರು ನ.8 ರಂದು ವಿನಾಯತಿ ಕೋರಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಜಯಲಲಿತಾ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್, ಹಾಜರಾತಿ ವಿನಾಯತಿ ನೀಡಲು ಸಾಧ್ಯವಿಲ್ಲ ಆದರೆ, ವಿಚಾರಣೆ ದಿನಾಂಕ ಬದಲಾವಣೆಗೆ ಕೋರಬಹುದು ಎಂದು ಸೂಚಿಸಿದೆ.
ಯಾವುದಿದು ಕೇಸ್?: 1991-96 ರ ಅವಧಿಯಲ್ಲಿ ಅಕ್ರಮವಾಗಿ 66 ಕೋಟಿ ರೂ. ಗಳಿಸಿದ ಆರೋಪವನ್ನು ಜಯಲಲಿತಾ ಅವರ ಮೇಲೆ ಹೊರೆಸಲಾಗಿದೆ. ವಿಚಾರಣೆಗೆ ಈವರೆಗೂ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವ ಜಯಲಲಿತಾ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಕೂಡಾ ಒಮ್ಮೆ ಕೋರಿದ್ದರು.












Click it and Unblock the Notifications