ಶೋಭಾ ಕೇಳಿದ ಪ್ರಶ್ನೆಗೆ ಕೋಡಿಮಠದ ಶ್ರೀಗಳ ಉತ್ತರ

ಒಗಟು ಪದ್ಯಗಳ ಮೂಲಕ ತಾಳೆಗರಿಯಲ್ಲಿ ಬರೆದ ಭವಿಷ್ಯವಾಣಿ ನುಡಿದ ಹಾರನಹಳ್ಳಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಭವಿಷ್ಯ ಇದುವರೆವಿಗೂ ಸುಳ್ಳಾಗಿಲ್ಲ. ಹೆಚ್ಚಿಗೆ ಪ್ರಶ್ನೆಗೆ ಉತ್ತರವಿಲ್ಲ. ಯಾವ ವಿವಿಐಪಿ ಬಂದರೂ ಮಠದ ನಿಯಮ ಮೀರಿ ಭವಿಷ್ಯ ನುಡಿದಿಲ್ಲ.
ಶೋಭಾ ಮೇಡಂಗೆ ಹೇಳಿದ್ದಿಷ್ಟು: ಕಾಲ ಮಿಂಚಿ ಹೋದ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವೆ ಶೋಭಾ ಕರಂದ್ಲಾಜೆ ನಮ್ಮನ್ನು ಸಂಪರ್ಕಿಸಿದ್ದಾರೆ. ಹಲವಾರು ಅಕ್ರಮಗಳನ್ನು ಮಾಡಿದ ಮೇಲೆ ಅದರ ಫಲವನ್ನು ಉಣ್ಣಲೇ ಬೇಕು.
ಬಿಜೆಪಿ ಸರ್ಕಾರ ಉಳಿಯಲಿದೆಯೇ ಇಲ್ಲವೇ, ಮಧ್ಯಂತರ ಚುನಾವಣೆ ನಡೆಯಲಿದೆಯೇ ಎಂಬುದನ್ನು ಸಂಕ್ರಾಂತಿವರೆಗೆ ಕಾದು ನೋಡಿ ಎಂದು ಸ್ವಾಮೀಜಿ ನುಡಿದ್ದರು.
"ನೀಚನಿಗೆ ದೊರೆತನ, ಹೇಡಿಗೆ ಹಿರಿತನ, ಅವಿವೇಕಿಗೆ ಮಠಾಧಿಪತಿ ಸ್ಥಾನ ಸಿಕ್ಕರೆ ನಾಡು ಹೇಗಿರುತ್ತೋ ನಮ್ಮ ನಾಡು ಕೂಡಾ ಹಾಗೆ ಇದೆ". 2011ರ ಡಿಸೆಂಬರ್ ಒಳಗೆ ಚುನಾವಣೆ ನಡೆಯಲಿದೆ ಎಂದು ಈ ಹಿಂದೆ ಸ್ವಾಮೀಜಿಗಳು ಹೇಳಿದ್ದರು.
ಚುನಾವಣೆ ಬಗ್ಗೆ ನುಡಿದ ಭವಿಷ್ಯ ನಿಜವಾಗುವುೇ ಎಂದು ಕಾದು ನೋಡಬೇಕಿದೆ. ಜಲಪ್ರಳಯ, ಅಡ್ವಾಣಿಗೆ ಪ್ರಧಾನಿ ಹುದ್ದೆ ಸೇರಿದಂತೆ ಅನೇಕ ರಾಷ್ಟ್ರನಾಯಕರ ಭವಿಷ್ಯ ಬಗ್ಗೆ ಹೇಳಿರುವ ಕೋಡಿಮಠದ ತಾಳೆಗರಿಯ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ.












Click it and Unblock the Notifications