ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲಿ - ಸ್ವಾಮೀಜಿ
ಹುಳಿಯೂರು
ನ 3: ಕುಮಾರಸ್ವಾಮಿ ಒಬ್ಬ ನಿಷ್ಕಳಂಕ ರಾಜಕಾರಿಣಿ, ಇವರ ಮೇಲೆ ಇಲ್ಲಸಲ್ಲದ ಕೇಸ್ ಹಾಕಿದರೂ ಅದರಿಂದ ಆರೋಪ ಮುಕ್ತರಾಗಿ ಬಂದಿದ್ದಾರೆ. ತಾನು ಮುಖ್ಯಮಂತ್ರಿಯಾಗಿದ್ದ ಕೆಲವೇ ತಿಂಗಳಲ್ಲಿ ಪಕ್ಷಾತೀತ ಜಾತ್ಯಾತೀತ ರಾಜಕಾರಣ ಮಾಡಿದ್ದಾರೆ. ಇವರೊಬ್ಬ ಪ್ರಾಮಾಣಿಕ ವ್ಯಕ್ತಿ ಎಂದು ಹೊಸದುರ್ಗ ತಾಲೂಕು ಚಿನ್ಮೂಲಾಮಠದ ಪುರುಷೋತ್ತಮಾನಂದಪುರಿ ಸ್ವಾಮೀಜಿಗಳು ಎಚ್ಡಿಕೆಗೆ " A + " ಸರ್ಟಿಫಿಕೇಟ್ ನೀಡಿದ್ದಾರೆ. id="toptextpromo">ಮಾಜಿ
ಮುಖ್ಯಮಂತ್ರಿ ಕುಮಾರಸ್ವಾಮಿ ಹಿಂದುಳಿದ ವರ್ಗಗಳ ಮೇಲೆ ಬಹಳಷ್ಟು ಕಾಳಜಿ ಇರುವ ರಾಜಕಾರಿಣಿ. ಬಡವರೆಂದರೆ ಅವರಿಗೆ ವಿಶೇಷ ಕಾಳಜಿ ಇದೆ. ಅವರು ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ನಾವು ಬಯಸುತ್ತೇವೆ. ವಿಧಾನಸೌಧದಲ್ಲಿ ಕೂತು ಜನರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಿಲ್ಲ ಎಂದರಿತ ಇವರು ಗ್ರಾಮವಾಸ್ತವ್ಯ ಕಾರ್ಯಕ್ರಮ ಶುರು ಮಾಡಿ ಇತರರಿಗೆ ಮಾದರಿ ಆಗಿದ್ದಾರೆಂದು ಪುರುಷೋತ್ತಮಾನಂದಪುರಿ ಸ್ವಾಮೀಜಿಗಳು ಕುಮಾರಸ್ವಾಮಿಗೆ ಶಹಬ್ಬಾಸ್ ಗಿರಿ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹುಳಿಯೂರಿನಲ್ಲಿ
ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸ್ವಾಮೀಜಿ, ಶರಣರು ಹಾಕಿಕೊಟ್ಟ ಧರ್ಮದ ಹಾದಿಯಲ್ಲಿ ನಮ್ಮ ದೇಶ ಸುಸಂಸ್ಕೃತ ದೇಶವೆಂಬ ಕೀರ್ತಿಗೆ ಪಾತ್ರವಾಗಿದೆ. ರಾಜಕಾರಿಣಿಗಳು ಪ್ರಾಮಾಣಿಕತನದಿಂದ ಕೆಲಸ ಮಾಡಿ ಜೀವನ ನಡೆಸಲಿ, ಪರೋಪಕಾರದಿಂದ ಪುಣ್ಯ ಸಂಪಾದಿಸಲಿ, ಪರಿಶುದ್ದ ಅಂತಃಕರಣದಿಂದ ದೇವರಿಗೆ ಪೂಜೆ ಸಲ್ಲಿಸಲಿ ಎಂದು ಕಿವಿಮಾತು ಹೇಳಿದ್ದಾರೆ.











Click it and Unblock the Notifications