ಅಶೋಕ್ ರಾಜೀನಾಮೆ ನೀಡಿ ಮನೆಗೆ ಹೋಗ್ಲಿ: ರೇಣುಕಾ

Minister Renukacharya
ಬೆಂಗಳೂರು, ನ.2 : ಸಚಿವ ಸಂಪುಟ ಸಭೆಯಲ್ಲಿ ಭೂ ಹಗರಣ ಆರೋಪಿ ಗೃಹ ಸಚಿವ ಆರ್ ಅಶೋಕ್ ಅವರ ರಾಜೀನಾಮೆಗೆ ಯಡಿಯೂರಪ್ಪ ಅವರ ಆಪ್ತ ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಒತ್ತಾಯಿಸಿದ ಪ್ರಸಂಗ ನಡೆದಿದೆ.

ಯಡಿಯೂರಪ್ಪ ಬೆಂಬಲಿಗರ ಆಗ್ರಹ ಕಂಡು ದಂಗಾದ ಮುಖ್ಯಮಂತ್ರಿ ಸದಾನಂದ ಗೌಡರು ಜಾಣತನದಿಂದ ವಿಷಯಾಂತರ ಮಾಡಿ ಸಭೆಯನ್ನು ಮುಂದೂಡಿದ್ದಾರೆ.

ಲೋಕಾಯುಕ್ತ ವಿಶೇಷ ನ್ಯಾಯಾಲಯ ಗೃಹ ಸಚಿವ ಅಶೋಕ್ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಅಶೋಕ್ ರಾಜೀನಾಮೆ ಸಲ್ಲಿಸಬೇಕೆಂದು ರೇಣುಕಾಚಾರ್ಯ ಆಗ್ರಹಿಸಿದರು.

ರೇಣುಕಾಚಾರ್ಯ ಅವರ ಆಗ್ರಹದಿಂದ ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟು ಮತ್ತೆ ಉಲ್ಬಣಿಸುವ ಸಾಧ್ಯತೆಗಳು ಕಂಡು ಬಂದಿದೆ.

ಅಶೋಕ್ ಅವರು ಜಗದೀಶ್ ಶೆಟ್ಟರ್ ಬಣದೊಡನೆ ಗುರುತಿಸಿಕೊಂಡಿದ್ದಾರೆ. ಯಡಿಯೂರಪ್ಪ ಬಣಕ್ಕೆ ಮೊದಲಿಂದಲೂ ಅಶೋಕ್ ಸ್ಥಾನಮಾನದ ಬಗ್ಗೆ ಯಡಿಯೂರಪ್ಪ ಬಣಕ್ಕೆ ಅಸಮಾಧಾನವಿದೆ.

ಲೋಕಾಯುಕ್ತ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಅನುಕೂಲವಾಗುವಂತೆ ಅಶೋಕ್ ರಾಜೀನಾಮೆ ನೀಡಬೇಕೆಂದು ರೇಣುಕಾಚಾರ್‍ಯ ಆಗ್ರಹಿಸಿದ್ದಾರೆ. ಅಡ್ವಾಣಿ ಅವರ ಜನ ಚೇತನ ಯಾತ್ರೆಗೆ ಅಶೋಕ್ ಕಪ್ಪುಚುಕ್ಕೆಯಾಗಲಿದ್ದಾರೆ ಎಂದು ರೇಣುಕಾ ಹೇಳಿದ್ದಾರೆ.

ರೇಣುಕಾ ಅವರ ಆಗ್ರಹಕ್ಕೆ ಸಚಿವ ಸಂಪುಟದಲ್ಲಿ ಯಾವುದೇ ರೀತಿಯ ಬೆಂಬಲ ವ್ಯಕ್ತವಾಗಿಲ್ಲ ಎನ್ನಲಾಗಿದೆ.

ಅಡ್ವಾಣಿಯ ರಥಯಾತ್ರೆಯ ಆಗಮನದ ಮುನ್ನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರಿಂದ ಯಡಿಯೂರಪ್ಪ ಬಣ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ.

ಯಡಿಯೂರಪ್ಪ ಬಣ ಅಶೋಕ್ ರಾಜೀನಾಮೆಗೆ ಒತ್ತಾಯಿಸಿದರೆ, ಶೆಟ್ಟರ್ ಬಣ ನಿರಾಣಿ ರಾಜೀನಾಮೆಗೆ ಒತ್ತಾಯಿಸುವ ಸಾಧ್ಯತೆಗಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+