ಅಂತಾರಾಷ್ಟ್ರೀಯ ಸಮಾವೇಶಕ್ಕೆ ಕಥೆಗಾರ ಅಬ್ದುಲ್ ರಶೀದ್

ಈ ಸಮಾವೇಶದಲ್ಲಿ ವಿಶ್ವದ ಐವತ್ತೆಂಟು ದೇಶಗಳ ರೇಡಿಯೋ ಹಾಗೂ ದೂರದರ್ಶನ ಮಾಧ್ಯಮಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಅಬ್ದುಲ್ ರಶೀದ್‌ರವರು "ಸ್ಥಳೀಯ ರೇಡಿಯೋ ಕೇಂದ್ರಗಳಿಂದ ಕೇಳುಗರು ಏನು ಬಯಸುತ್ತಾರೆ" ಎಂಬ ವಿಷಯದ ಕುರಿತು ತಮ್ಮ ಅನಿಸಿಕೆಗಳನ್ನು ಸಮಾವೇಶದಲ್ಲಿ ಮಂಡಿಸಲಿದ್ದಾರೆ.
ಈಗಾಗಲೇ ಮಡಿಕೇರಿ ಕೇಂದ್ರದಲ್ಲಿ ಅಬ್ದುಲ್ ರಶೀದ್‌ರವರು ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮ ಕಾವೇರಿ ಎಕ್ಸ್‌ಪ್ರೆಸ್ ಮತ್ತು ಹಳ್ಳಿ ರೇಡಿಯೋ ಕ್ರಾರ್ಯಕ್ರಮಗಳು ಜನಪ್ರಿಯವಾಗಿದ್ದು, ಕೇಳುಗರನ್ನು ತನ್ನತ್ತ ಸೆಳೆಯುತ್ತಿವೆ.
ಇದುವರೆಗೆ ಮಂಗಳೂರು, ಶಿಲ್ಲಾಂಗ್, ಮೈಸೂರು, ಗುಲ್ಬರ್ಗ ಮೊದಲಾದ ಆಕಾಶವಾಣಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿರುವ ಅಬ್ದಲ್ ರಶೀದ್‌ರವರು, ಈ ಹಿಂದೆ ಇಂಗ್ಲೆಂಡ್‌ನ ಥಾಮ್ಸನ್ ಫೌಂಡೇಶನ್‌ನಿಂದ ರೇಡಿಯೋ ಸಾಕ್ಷ್ಯ ಚಿತ್ರ ನಿರ್ಮಾಣಕ್ಕಾಗಿ ಐರ್ಲೆಂಡಿಗೆ ಹೋಗಿ ಬಂದಿದ್ದಾರೆ.












Click it and Unblock the Notifications