ವೆಂಕಟಮ್ಮನಹಳ್ಳಿ ಹತ್ಯಾಕಾಂಡ : ನಕ್ಸಲರು ದೋಷಮುಕ್ತ

Venkatammanahalli police massacre : 19 naxals acquitted
ತುಮಕೂರು, ಅ. 29 : ಆರೂವರ್ಷಗಳ ಹಿಂದೆ 6 ಪೊಲೀಸರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಹೊತ್ತಿದ್ದ 19 ಶಂಕಿತ ನಕ್ಸಲರನ್ನು ದೋಷಮುಕ್ತರನ್ನಾಗಿ ಮಾಡಿ ತುಮಕೂರಿನ ಸೆಷನ್ಸ್ ನ್ಯಾಯಾಲಯ ಅ.29ರಂದು ಶನಿವಾರ ಮಹತ್ವದ ತೀರ್ಪು ನೀಡಿದೆ.

2005ರ ಫೆಬ್ರವರಿ 5ರಂದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಕೆಎಸ್ಆರ್ಪಿ ಕ್ಯಾಂಪಿಗೆ ನುಗ್ಗಿ ಓರ್ವ ನಾಗರಿಕ ಸೇರಿ 6 ಪೊಲೀಸರ ನರಮೇಧ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿದಂತೆ ಅಶ್ವತ್ಥ, ಗಂಗಣ್ಣ, ನರಸಿಂಹ, ವೆಂಕಟೇಶ್ ಸೇರಿದಂತೆ 19 ಜನರನ್ನು ಬಂಧಿಸಲಾಗಿತ್ತು.

2005ರಲ್ಲಿ ಚಿಕ್ಕಮಗಳೂರಿನ ಮೆಣಸಿನಹಾಡ್ಯದಲ್ಲಿ ನಕ್ಸಲರ ನಾಯಕ ಸಾಕೇತ್ ರಾಜನ್ ನನ್ನು ಪೊಲೀಸರು ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದ್ದರು. ಈ ಹತ್ಯೆಗೆ ಪ್ರತೀಕಾರವಾಗಿ ಕೆಎಸ್ಆರ್ಪಿ ಕ್ಯಾಂಪಿನ ಮೇಲೆಯೇ ದಾಳಿ ಮಾಡಿ ಪೊಲೀಸರನ್ನು ಗುಂಡಿಕ್ಕಿ ಕೊಂದುಹಾಕಲಾಗಿತ್ತು.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಿಗಳನ್ನು ಬಂಧಮುಕ್ತ ಮಾಡಲಾಗಿದೆ ಎಂದು ನ್ಯಾಯಾಧೀಶ ಎನ್ ಆನಂದ್ ತೀರ್ಪಿನಲ್ಲಿ ತಿಳಿಸಿದ್ದಾರೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಸರಕಾರಿ ವಕೀಲ ಬಿಕ್ಕಣನವರ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+