ನ್ಯಾ. ಸುಧೀಂದ್ರರಾವ್: ಯಥಾ ನ್ಯಾಯಾಧೀಶ ತಥಾ ನ್ಯಾಯ
ಬೆಂಗಳೂರು,
ಅ 29: ಕನ್ನಡ ನಾಡೊಂದು ಇತ್ತೀಚಿನ ದಿನಗಳಲ್ಲಿ ಇಬ್ಬರು ಅಪರೂಪದ ನ್ಯಾಯಮೂರ್ತಿಗಳನ್ನು ಕಂಡಿದೆ. ತಾವು ದುಡಿಯುತ್ತಿರುವ ಸಂಸ್ಥೆಗಳ ತಾಕತ್ತು ಏನು ಎಂಬುದನ್ನು ಇಡೀ 'ಲೋಕ'ಕ್ಕೆ ಪರಿಚಯಿಸಿದವರು. ಒಬ್ಬರು, ಅಧಿಕಾರ ಬಿಟ್ಟುಕೊಡುವ ಮುನ್ನ ಜನ್ಮಪರ್ಯಂತ ಅಧಿಕಾರದ ಕುರ್ಚಿಗೆ ಅಂಟಿಕೊಂಡವರಂತೆ ಆಡುತ್ತಿದ್ದ ವ್ಯಕ್ತಿಯನ್ನು ಅಧಿಕಾರ ತ್ಯಜಿಸುವಂತೆ ಮಾಡಿದ್ದವರು. ಮತ್ತೊಬ್ಬರು, ಕೊನೆಗೂ ಅಧಿಕಾರದಿಂದ ಕೆಳಗಿಳಿದ ಆ ವ್ಯಕ್ತಿಗೆ ಜೈಲು ಸುಖವನ್ನು ಕರುಣಿಸಿದವರು. ಈ ಇಬ್ಬರೂ ನ್ಯಾಯಮೂರ್ತಿಗಳ ಬಗ್ಗೆ ಜನ ತಣ್ಣನೆಯ ಹೊತ್ತಿನಲ್ಲಿ, ಶಾಂತಿ ಕಾಲದಲ್ಲಿ ಮಾತನಾಡಿಕೊಳ್ಳುವಂತಾಗಿದೆ. id="toptextpromo">ಹೌದು,
ನ್ಯಾಯದ ಪಕ್ಷಪಾತಿಯಾಗಿರುವ ನ್ಯಾಯಮೂರ್ತಿ ಎನ್. ಕೆ. ಸುಧೀಂದ್ರರಾವ್ ಅವರ ಬಗ್ಗೆ ಇತ್ತೀಚೆಗೆ ಪ್ರಶಂಸೆಯ ಸುರುಮಳೆಗೆರೆಯುತ್ತಿದೆ. ಹಾಗೆಂದು ಈ ಹೊಗಳಿಕೆ ಅತಿರಂಜಿತವಲ್ಲ. ಎಲ್ಲರ ಬಾಯಲ್ಲೂ ನ್ಯಾ. ಸುಧೀಂದ್ರ, ಸುಧೀಂದ್ರ. ನ್ಯಾಯಾಧೀಶರೇ ಆಗಿರಲಿ, ವಕೀಲ ವೃಂದವೇ ಆಗಲಿ ಎಲ್ಲ ಕಡೆಯಿಂದಲೂ ನಿಮ್ಮ ಬಗ್ಗೆ ಮೆಚ್ಚುಗೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಅಂದರೆ ನ್ಯಾ. ಸುಧೀಂದ್ರ ಅವರೆದುರು ಒಂದೆರಡು ಗಳಿಗೆ ಪ್ರತಿವಾದಕ್ಕೆ ನಿಂತರೆ ತಮ್ಮ ವೃತ್ತಿ ಬದುಕು ಸಾರ್ಥಕ ಎಂದು ವಕೀಲರು ಹೇಳತೊಡಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇನ್ನು,
ನಿಮ್ಮದೇ ನ್ಯಾಯಾಧೀಶ ಸಹೋದ್ಯೋಗಿಗಳಿಗೂ ಕೋರ್ಟ್ ತಾಕತ್ತು ಏನು ಎಂಬುದನ್ನು ಜ್ಞಾಪಿಸಿದ್ದೀರಿ. ಇದರಿಂದಾಗಿಯೇ ಅಲ್ಲವೇ, ಭ್ರಷ್ಟಾಚಾರದ ಪ್ರಕರಣದಲ್ಲಿ ಜಾಮೀನು ನೀಡುವ ಬಗ್ಗೆ ಸುಪ್ರೀಂಕೋರ್ಟ್ ಏನು ಹೇಳಿದೆ ಎಂಬುದನ್ನು ಲೋಕಾಯುಕ್ತ ನ್ಯಾಯಾಧೀಶರು ಹೈಕೋರ್ಟಿಗೆ ಜ್ಞಾಪಿಸಿಕೊಡುವ ಧೈರ್ಯ ತೋರಿದ್ದು. ಯಥಾ ನ್ಯಾಯಾಧೀಶ ತಥಾ ನ್ಯಾಯ ...











Click it and Unblock the Notifications