ಸಚಿವ ನಿರಾಣಿ ವಿರುದ್ಧ ಇಂದೇ ಎಫ್ಐಆರ್: ಎಡಿಜಿಪಿ ಗಾಂವ್ಕರ್

ಭ್ರಷ್ಟಾಚಾರ ತಡೆ ಕಾಯಿದೆಯಡಿ ಇಂದೇ ಬೆಂಗಳೂರು ಜಿಲ್ಲಾ ಲೋಕಾಯುಕ್ತ ಎಸ್ಪಿ ಶಿವಶಂಕರ್ ಕ್ರಿಮಿನಲ್ ಪ್ರಕರಣ ದಾಖಲಿಸಲಿದ್ದಾರೆ ಎಂದು ಗಾಂವ್ಕರ್ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಬಿಜೆಪಿ ಸರಕಾರದ ಮತ್ತೂಬ್ಬ ಸಚಿವರ ವಿರುದ್ಧ ಲೋಕಾಯುಕ್ತ ಪೊಲೀಸರಿಂದ ಕ್ರಿಮಿನಲ್ ಕೇಸ್ ದಾಖಲಾಗಲಿದೆ. ಈ ಪ್ರಕರಣದಲ್ಲಿ ಸಚಿವ ನಿರಾಣಿ ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳಿದ್ದಾರೆ.
ದೇವನಹಳ್ಳಿ, ಡಾಬಸ್‌ಪೇಟೆ ಸೇರಿದಂತೆ ಹಲವು ಕಡೆ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿರುವ ಬಗ್ಗೆ ಉದ್ಯಮಿ ಆಲಂ ಪಾಷಾ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು. ಪಾಷಾ ದೂರನ್ನು ಮಾನ್ಯ ಮಾಡಿರುವ ಲೋಕಾಯುಕ್ತ ಕೋರ್ಟ್ ನಿರಾಣಿ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಿ ನ. 16ರೊಳಗೆ ವರದಿ ನೀಡುವಂತೆ ಮೊನ್ನೆ ಸೋಮವಾರ ಆದೇಶಿಸಿತ್ತು.
ಇವರೇ ಆರೋಪಿಗಳು...
ಮುರುಗೇಶ್ ನಿರಾಣಿ, ಎಚ್.ಆರ್.ನಿರಾಣಿ, ಶರಣ ಬಸಪ್ಪ ವಿ. ಕಿರಿಯಣ್ಣವನರ್, ಆರ್.ವಿ. ವಟ್ನಾಳ್, ಬೇಗೂರು ರುದ್ರಮೂರ್ತಿ ಪೂರ್ಣ ಚಂದ್ರ, ಶಾಂತಾ ಬೇಲೂರು, ಬಿ.ಪಾಲಾಕ್ಷ, ಮೋಹನ್ ಎಂ ಹಿರೇಮಠ್ ಮತ್ತು ಎಂ ರೋಸಿ.











Click it and Unblock the Notifications